|
ಮುಖಪುಟ ನಮ್ಮ ಮೊದಲ ಮಾತು... ಸಹೃದಯೀ ಕನ್ನಡಿಗರಿಗೆ ಹೃದಯಪೂರ್ವಕ ವಂದನೆಗಳು
ಮಾನ್ಯರೇ, ಕನ್ನಡಪ್ರಭ ದಿನಪತ್ರಿಕೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಪದಾಕಾರಿಗಳಾಗಿ ಪತ್ರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರೀ ಟಿ.ಎಂ. ಸತೀಶ್ ನನ್ನ ಪತಿ. ೧೯೯೦ರ ದಶಕದ ಆದಿಯಿಂದ ಬೆಂಗಳೂರು ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮ ನೀಡಿದ, ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ಹಾಗೂ ಪ್ರಸಿದ್ಧ ಪ್ರಕಾಶನ ಸಂಸ್ಥೆಯ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಬರವಣಿಗೆಗೆ ಸೂರ್ತಿಯಾಗಿದ್ದರೆ, ಮೆಕ್‌ಮಿಲನ್ ಇಂಡಿಯಾ ಬಳಗದ ಸೈಂಟಿಫಿಕ್ ಡಾಟಾ ಬ್ಯಾಂಕ್ ಸರ್ವೀಸಸ್‌ನಲ್ಲಿ ಆನ್‌ಲೈನ್ ಕಾಪಿ ಎಡಿಟರ್ ಆಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅಂತರ್ಜಾಲ ಹಾಗೂ ವೆಬ್‌ತಾಣ ನಿರ್ಮಾಣದ ಜ್ಞಾನ ನನ್ನದಾಯ್ತು. ಅಂತರ್ಜಾಲ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ನನಗೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ರಿಕಾ ಕಾರ್ಯದರ್ಶಿಗಳೂ ಹಾಗೂ ಪತ್ರಿಕೋದ್ಯಮದ ಪರಮೋಚ್ಚ ಪ್ರಶಸ್ತಿಯಾದ ಟಿಎಸ್ಸಾರ್ ಪುರಸ್ಕಾರಕ್ಕೆ ಪಾತ್ರರಾದ ಹಿರಿಯ ಪತ್ರಕರ್ತ ಪೂಜ್ಯ ಶ್ರೀ ಜಯಶೀಲರಾವ್, ಮಾರ್ಗದರ್ಶನ ನೀಡಿ, ಸಂಪೂರ್ಣ ಧೈರ್ಯ ತುಂಬಿದ್ದಾರೆ. www.educationbangalore.com ಆರಂಭಿಸಿ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳ ಹಾಗೂ ಉನ್ನತ ಶಿಕ್ಷಣ ಕೋರ್ಸ್‌ಗಳ ಬಗ್ಗೆ ಅತ್ಯುಪಯುಕ್ತ ಮಾಹಿತಿ ನೀಡುತ್ತಾ, ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಹಿರಿಯರಾದ ಶ್ರೀ ವೆಂಕಟರಮಣ ಹೆಗಡೆ ಅವರು ಆಡಳಿತಾತ್ಮಕ ಹಾಗೂ ತಾಂತ್ರಿಕ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಲವು ಹಿರಿಯ ಪತ್ರಕರ್ತರು ಬೆನ್ನು ತಟ್ಟಿ ಮುಂದಡಿ ಇಡಲು ಪ್ರೇರೇಪಿಸಿದ್ದಾರೆ. ಹಿರಿಯರ ಪ್ರೋತ್ಸಾಹದಿಂದ ಕನ್ನಡರತ್ನ.ಕಾಂ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಒದಗಿಸುವ ಹಲವು ವೆಬ್ ಸೈಟ್ ಗಳನ್ನು ನೀವೂ ನಮ್ಮನ್ನು ಹರಸಿ, ಸಹೃದಯೀ ಕನ್ನಡಿಗರೆಲ್ಲರೂ ಈಗಷ್ಟೇ ಅಂಬೆಗಾಲಿಡುತ್ತಲಿರುವ ಈ ಕನ್ನಡ ಕಂದಮ್ಮ (ಕನ್ನಡರತ್ನ.ಕಾಂ)ನನ್ನು ಕೈಹಿಡಿದು ನಡೆಸಿ. ನಿಮ್ಮೆಲ್ಲರ ಪ್ರೋತ್ಸಾಹ - ಸಹಕಾರವೇ ನಮಗೆ ಶ್ರೀರಕ್ಷೆ. ನಮ್ಮ ಈ ವೆಬ್‌ಸೈಟ್ ನಿಮಗೆ ಮೆಚ್ಚುಗೆಯಾದರೆ, ನಿಮ್ಮ ಇತರ ಕನ್ನಡ ಗೆಳೆಯರಿಗೂ ದಯಮಾಡಿ ತಿಳಿಸಿ. ಇಂತಿ ಶೋಭಾ ಸತೀಶ್, ಬಿಎಸ್ಸಿ, ಎಂ.ಎ,ಬಿಎಡ್ ಸ್ಥಾಪಕ ಸಂಪಾದಕಿ, ಕನ್ನಡರತ್ನ.ಕಾಂ.
******
ನಿಮ್ಮ ಪ್ರೋತ್ಸಾಹದ ಫಲವಾಗಿ ನಾವು, ಸಾರ್ವಜನಿಕರ ಅನುಕೂಲಕ್ಕಾಗಿ www.bangalorechoultries.com ಆರಂಭಿಸಿದ್ದೇವೆ. ಈ ತಾಣ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿರುವ ಕಲ್ಯಾಣ ಮಂಟಪಗಳ ಮಾಹಿತಿಯನ್ನು ಒದಗಿಸುತ್ತದೆ. ಈ ಅಂತರ್ಜಾಲ ತಾಣವನ್ನು ಉಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪನವರು ತಮ್ಮ ನಿವಾಸದಲ್ಲೇ ಉದ್ಘಾಟಿಸಿದರು.ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಪಾಲ್ಗೊಂಡಿದ್ದರು. ಬೆಂಗಳೂರು ಚೌಲ್ಟ್ರೀಸ್.ಕಾಂಗೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ನಾವು ನಂತರ www.bangaloresareehouses.com ಹಾಗೂ www.bangalorejewelleryshops.com ಆರಂಭಿಸಿದೆವು. ಈ ತಾಣಗಳು ಬೆಂಗಳೂರಿನಲ್ಲಿನ ಜವಳಿ ಮತ್ತು ಚಿನ್ನಾಭರಣದಂಗಡಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಾ ಅತ್ಯಂತ ಜನಪ್ರಿಯವಾಗಿವೆ.
ನಮ್ಮ ಎಲ್ಲ
ಅಂತರ್ಜಾಲ ತಾಣಗಳಿಗೆ ಪ್ರತಿ ನಿತ್ಯ ಭೇಟಿ ನೀಡಿ, ನಮಗೆ ಪರೋಕ್ಷವಾಗಿ ಹಾಗೂ
ಪ್ರತ್ಯಕ್ಷವಾಗಿ ಹುರಿದುಂಬಿಸುತ್ತಿರುವ ತಮ್ಮ ಬೆಂಬಲ ನಮಗೆ ಇನ್ನೂ ಹೆಚ್ಚಿನ ಅಂತರ್ಜಾಲ
ತಾಣ ನಿರ್ಮಾಣಕ್ಕೆ ಇಂಬು ನೀಡಿತು. ಓದುಗರಿಂದ ದೊರೆತ ಸಲಹೆಯನ್ನು ಆಧರಿಸಿ ನಾವು
www.ourtemples.in
ಆರಂಭಿಸಿದೆವು. ಈ
ತಾಣ ಕರ್ನಾಟಕದ ಪ್ರಮುಖ ದೇವಾಲಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಈ
ತಾಣದಲ್ಲಿ ಸ್ಥಳಪುರಾಣ, ಇತಿಹಾಸ, ದೇವಾಲಯದ ವಾಸ್ತುಶಿಲ್ಪ, ಐತಿಹ್ಯ, ಹೋಗುವ ಬಗೆ,
ಸೌಕರ್ಯ ಇತ್ಯಾದಿ ಉಪಯುಕ್ತ
ಇದಲ್ಲದೆ ಕನ್ನಡರತ್ನ.ಕಾಂ ನಾಡಿನ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆ ಕನ್ನಡಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ, ಸಂಸ್ಥೆಗಳಿಗೆ ಅಂತರ್ಜಾಲ ತಾಣ (ವೆಬ್ ಸೈಟ್) ನಿರ್ಮಿಸಿಕೊಟ್ಟಿದೆ. ಈ ನಾಡಿನ ಮತ್ತು ಹೊರನಾಡಿನ ಕನ್ನಡಿಗರು ನಮಗೆ ನೀಡುತ್ತಿರುವ ಸಹಕಾರಕ್ಕೆ ನಾವು ಸದಾ ಆಭಾರಿಗಳು.
| |||