|
ಜನಾನುರಾಗಿ, ಸಮಾಜ ಸೇವಕ ಶಂಕರನಾರಾಯಣ್
ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಯಾಗಿ, ವಿದ್ಯಾರ್ಥಿಗಳ ನ್ಯಾಯಸಮ್ಮತ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿ ಯಶಸ್ವಿಯಾದ ಶಂಕರನಾರಾಯಣ್ ವಾಣಿಜ್ಯ ಪದವಿ ಪಡೆದ ಬಳಿಕವೂ ತಮ್ಮ ಬಡಾವಣೆಯ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ, ಜನಸೇವೆಗೆ, ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು.
೧೯೮೦ರ
ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಬಳಿಕವೂ ತಮ್ಮನ್ನು ವಿವಿಧ ಸಾಂಸ್ಕೃತಿಕ,
ಸಾಹಿತ್ಯಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅವರು,
ಕನ್ನಡ, ನಾಡು,
ನುಡಿ, ಸಂಸ್ಕೃತಿಯ ರಕ್ಷಣೆಗೆ ನಡೆದ
ಹೋರಾಟಗಳಿಂದ ಹಿಂದೆ
ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಶಂಕರನಾರಾಯಣ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕಾದ್ಯಂತ ಪ್ರವಾಸ ಮಾಡಿ ತಮ್ಮ ಕುಲಬಾಂಧವರ ನೋವು, ನಲಿವುಗಳಿಗೆ ಸ್ಪಂದಿಸುತ್ತಿದ್ದಾರೆ. ಬ್ರಾಹ್ಮಣ ಮಹಾಸಭಾ ತನ್ನದೇ ಆದ ಸ್ವಂತ ಕಟ್ಟಡ ಹೊಂದಲು, ೨೩ಸಾವಿರ ಚದರಡಿಯ ನಿವೇಶನವನ್ನು ಬಿಡಿಎಯಿಂದ ದೊರಕಿಸಿಕೊಡುವಲ್ಲಿ ಇವರ ಪಾತ್ರ ಮಹತ್ವವಾದದ್ದು. ಮಹಾಸಭಾದ ವತಿಯಿಂದ ಸುಮಾರು ೨೦೦ಕ್ಕೂ ಹೆಚ್ಚು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ ಕೀರ್ತಿಯೂ ಇವರದು.
ಬೆಂಗಳೂರಿನ ಶಂಕರಮಠದ ಆವರಣದಲ್ಲಿ ಶಂಕರನಾರಾಯಣ್ ಸಂಘಟಿಸಿದ್ದ ಲಲಿತಾ ಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ೮ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಅರ್ಚಕರ ಸಂಕಷ್ಟಗಳಿಗೂ ಸ್ಪಂದಿಸಿದ ಶಂಕರನಾರಾಯಣ್, ಅರ್ಚಕರಿಗೆ ಗೌರವಧನ ಕೊಡಿಸುವಲ್ಲಿ ವಹಿಸಿದ ಪಾತ್ರವನ್ನು ಮರೆಯುವಂತೆಯೇ ಇಲ್ಲ. ಬ್ರಾಹ್ಮಣ ಸಮುದಾಯದಲ್ಲಿ ನಡೆದಾಡುವ ದೇವರೆಂದೇ ಕರೆಸಿಕೊಂಡಿದ್ದ ಮಂತ್ರಾಲಯ ಮಠದ ಶ್ರೀಸುಷಮೀಂದ್ರ ತೀರ್ಥರ ಹಾಗೂ ಸುಮತೀಂದ್ರ ತೀರ್ಥರಿಗೆ ಬೆಂಗಳೂರಿನಲ್ಲಿ ಭಕ್ತಿಪುರಸ್ಸರ ಸಮಾರಂಭ ಏರ್ಪಡಿಸಿ ಗೌರವ ಸಮರ್ಪಿಸಿದ ಕೀರ್ತಿಯೂ ಇವರದು.
ಕಳೆದ ೨೫ ವರ್ಷಗಳ ಹಿಂದೆ ರಾಜಕೀಯರಂಗ ಪ್ರವೇಶಿಸಿದ ಶಂಕರನಾರಾಯಣ್ ವಿವಿಧ ರಾಜಕೀಯ ಪಕ್ಷಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಎಂದೂ ಅಧಿಕಾರಕ್ಕೆ ಆಸೆ ಪಡೆದ ಅವರು ಪಕ್ಷದ ಸಂಘಟನೆಗೇ ತಮ್ಮನ್ನು ತೊಡಗಿಸಿಕೊಂಡವರು. ೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಯಶವಂತಪುರ, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಬಿ.ಜೆ.ಪಿ. ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಶಂಕರನಾರಾಯಣ್ ಕಳಹಂತದಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಮಾಡಿದ ಕಾರ್ಯವನ್ನು ಪಕ್ಷವೂ ಗುರುತಿಸಿದೆ. ೨೦೦೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತಕುಮಾರ್ ಅವರ ಪರ ಮತ ಯಾಚಿಸಿದ ಶಂಕರನಾರಾಯಣ್, ಅವರ ಗೆಲುವಿಗೂ ತಮ್ಮ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಿದ್ದಾರೆ.
ಇವರಿಂದ ಉಪಕೃತರಾದವರು, ಅಭಿಮಾನಿಗಳು ಎಂ.ವಿ.ಶಂಕರನಾರಾಯಣ್ ಹಿತೈಷಿಗಳ ವೇದಿಕೆಯನ್ನೇ ಸ್ಥಾಪಿಸಿದ್ದು, ಈ ವೇದಿಕೆ ಮೂಲಕ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಶಂಕರನಾರಾಯಣ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿವೆ. | |||