|
ಮುಖಪುಟ
/ಸಿನಿಮಾ
ನಟ, ನಾಟಕಕಾರ ರಾಜಾನಂದ್ ಒಂದು ನೆನಪು
ಕ
ಚಕ್ರತೀರ್ಥ ಚಿತ್ರದ ಮೂಲಕ
ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಜಾನಂದ್ ಅಭಿನಯಿಸಿದ ಕೊನೆಯ ಚಿತ್ರ
ಬಯಲುದೀಪ. ಗುರುಶಿಷ್ಯರು,
ಮಯೂರ ಸೇರಿದಂತೆ 318ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಪೋಷಕ
ಪಾತ್ರಗಳಲ್ಲಿ ನಟಿಸಿದ್ದರು.
ಹಾರನಹಳ್ಳಿ ಇವರ
ಹುಟ್ಟೂರಾದರೆ, ರಂಗಭೂಮಿಗೆ ಬರುವ ಮುನ್ನ ಇದ್ದ ಹೆಸರು ವೆಂಕಟರಾಜು.
ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಅವರು ಉದರ ಪೋಷಣೆಗಾಗಿ ಆಯ್ಕೆ
ಮಾಡಿಕೊಂಡಿದ್ದು ರಂಗಭೂಮಿಯನ್ನು. ಪ್ರಹ್ಲಾದ ಚರಿತ್ರೆ ಮೂಲಕ ರಂಗಪ್ರವೇಶ ಮಾಡಿದ
ವೆಂಕಟರಾಜು ಹಿಂತಿರುಗಿ ನೋಡಲೇ ಇಲ್ಲ.
ಗುಬ್ಬಿ ವೀರಣ್ಣ ಅವರ ಕಂಪನಿಗೆ
ಸೇರಿದ ಬಳಿಕ ವೆಂಕಟರಾಜು, ರಾಜಾನಂದರಾದರು. ಗುಬ್ಬಿ ವೀರಣ್ಣನವರ ಕಂಪನಿಯಿಂದ,
ನಟರತ್ನಾಕರ ಹಿರಣ್ಣಯ್ಯ ಅವರ ಕಂಪನಿ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ
ಅಭಿನಯಿಸಿದ ರಾಜಾನಂದ್ ನಂತರ ತಮ್ಮದೇ ಆದ ರಂಗವೈಭವ ಎಂಬ ಸಂಸ್ಥೆಯನ್ನೂ ಕಟ್ಟಿದರು.
ತಾವೇ ರಚಿಸಿದ ಹಲವು ನಾಟಕಗಳನ್ನು ರಂಗದ ಮೇಲೆ ತಂದರು.
ತಮಗೆ ಸಿಕ್ಕ ಚಿಕ್ಕ
ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ರಾಜಾನಂದ್, ಸಾಹಿತ್ಯದ ಗೀಳೂ
ಅಂಟಿಸಿಕೊಂಡಿದ್ದರು. ತಾವೇ ರಚಿಸಿ, ನಿರ್ದೇಶಿಸಿ ನಾಟಕವನ್ನೂ ಆಡಿಸುತ್ತಿದ್ದರು.
ಇವರು ಬರೆದ ನಾಟಕಗಳ ಸಂಖ್ಯೆ 200ಕ್ಕೂ ಹೆಚ್ಚು ಎಂದರೆ ಅಚ್ಚರಿ
ಎನಿಸದಿದರು.ಇದಲ್ಲದೆ ಸಾವಿರಾರು ವಚನ, ಕವನಗಳನ್ನೂ ಅವರು ರಚಿಸಿದ್ದರು.
| |||