ಮುಖಪುಟ /ನಮ್ಮಹಬ್ಬಗಳು    

ಮಕರ ಸಂಕ್ರಾಂತಿ ಎಂಬ ಸುಗ್ಗಿಯ ಹಿಗ್ಗಿನ ಹಬ್ಬ...
ಮಗ್ಗಿನ ಜಡೆ ಹಾಕಿಕೊಂಡು, ಹೊಸಬಟ್ಟೆ ತೊಟ್ಟು ಬಂಧು ಮಿತ್ರರ ಮನೆಮನೆಗೆ ತೆರಳಿ ಕಬ್ಬಿನ ತುಂಡಿನ ಜೊತೆ ಎಳ್ಳು ಬೀರುವುದು ಕರ್ನಾಟಕದ ವೈಶಿಷ್ಟ್ಯ. ಹೊಸ ಅಕ್ಕಿಯಲ್ಲಿ ಪೊಂಗಲ್ ಮಾಡುವುದು, ಕೃಷಿಗೆ ನೆರವಾದ ದನಕರುಗಳ ಪೂಜೆ೫ರ ಈ ದಿನದ ವಿಶೇಷ. ಇದು ಸಂಕ್ರಾಂತಿ ಸುಗ್ಗಿಯ ಹಿಗ್ಗಿನ ಹಬ್ಬ....

 *ವಾಗ್ಮಿತ್ರ

Kushi, ಮಾಗಿಯ ಚಳಿಗೆ ಮುದುಡಿದ ಮನಕ್ಕೆ ಮುದ ನೀಡುವ ಮಂಗಳಕರವಾದ ಹಬ್ಬ ಮಕರ ಸಂಕ್ರಾಂತಿ. ಈ ಹಬ್ಬಕ್ಕೆ  ಹಲವಾರು ಹೆಸರುಗಳಿವೆ. ಕೆಲವರು ಹಿಗ್ಗಿನಿಂದ ಸುಗ್ಗಿ ಎಂದರೆ, ಮತ್ತೆ ಕೆಲವರು ಪೊಂಗಲ್ ಎನ್ನುತ್ತಾರೆ. ಶ್ರೀಸಾಮಾನ್ಯರು ಸಂಕ್ರಾಂತಿ ಎಂದು ಕರೆದರೆ, ಪಂಡಿತರು ಮಕರ ಸಂಕ್ರಮಣ ಎಂದು ಹೇಳುತ್ತಾರೆ. 

ವಾಸ್ತವವಾಗಿ ಸೂರ‍್ಯದೇವನು ದಕ್ಷಿಣಾಯನದಿಂದ ಉತ್ತರಾಯಣವನ್ನು ಪ್ರವೇಶಿಸುವ ದಿನವೇ ಸಂಕ್ರಾಂತಿ. ಇದು ಸಂಕ್ರಮಣ ಕಾಲವಾದ್ದರಿಂದ ಇದಕ್ಕೆ ಮಕರ ಸಂಕ್ರಮಣ ಎಂಬ ಹೆಸರು. ಈ ದಿನವನ್ನು ಉತ್ತರಾಯಣ ಪುಣ್ಯಕಾಲವೆಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಜನವರಿ ೧೪ರಂದೇ ಬರುವ ಈ ಹಬ್ಬ ಕೆಲವೊಮ್ಮೆ ಜ.೧೫ರಂದು ಬರುವುದೂ ಉಂಟು. 

ಜನವರಿ ತಿಂಗಳ ಮಧ್ಯಭಾಗ ಸುಗ್ಗಿಯ ಕಾಲ. ಹಿಂಗಾರು ಬೆಳೆ ಬರುವ ಕಾಲ. ಹೊಸ ಭತ್ತದ ಪಸಲು ಬರುವ ಕಾಲ. ಹೀಗಾಗಿ ಸಮೃದ್ಧವಾಗಿ ಬೆಳೆದ ಭತ್ತ ಕುಟ್ಟಿ (ಈಗ ಮಿಲ್ ಮಾಡಿಸಿ)ದ ಹೊಸ ಅಕ್ಕಿಯಲ್ಲಿ ಸಿಹಿ ಮಾಡಿ ಅನ್ನ ನೀಡಿದ ದೇವರಿಗೆ ಕೃತಜ್ಞತೆ ಅರ್ಪಿಸುವುದೇ ಈ ಹಬ್ಬದ ಸಂಕೇತ.

sankrathi, ಸಂಕ್ರಾಂತಿ ಕನ್ನಡರತ್ನ.ಕಾಂ, ಸುಗ್ಗಿಯ ಹಬ್ಬ ಹೊಸ ಮಡಕೆಯಲ್ಲಿ, ಹೊಸ ಅಕ್ಕಿಯಲ್ಲಿ ಮಾಡುವ ಸಿಹಿ ಪೊಂಗಲ್ ಬಲು ರುಚಿ. ಅದಕ್ಕಾಗಿಯೇ ವಿಶೇಷವಾಗಿ ಎಲ್ಲರ ಮನೆಯಲ್ಲೂ ಅಂದು  ಸಿಹಿ ಪೊಂಗಲ್ ಮಾಡುತ್ತಾರೆ. ಹೀಗಾಗೇ ಈ ಹಬ್ಬಕ್ಕೆ ಪೊಂಗಲ್ ಎಂದೂ ಹೆಸರು ಬಂದಿದೆ. ಮೈಸೂರು ಸೀಮೆಯಲ್ಲಿ ಪೊಂಗಲ್‌ಗೆ ಹುಗ್ಗಿ ಎನ್ನುತ್ತಾರೆ.

ಸಂಕ್ರಾಂತಿ ಸುಗ್ಗಿಯ ಕಾಲವಾದ್ದರಿಂದ ಈ ಹಬ್ಬಕ್ಕೆ ಸುಗ್ಗಿ ಎಂಬ ಹೆಸರೂ ಬಂದಿದೆ. ಈ ದಿನದ ಮತ್ತೊಂದು ವಿಶೇಷ ಬಿಳಿ ಎಳ್ಳು, ಕೊಬ್ಬರಿ, ಹುರಿಗಡಲೆ ಹಾಗೂ ಬೆಲ್ಲ ಮಿಶ್ರಿತ ಖಾದ್ಯ. ಇದು ಹಳೆ ಮೈಸೂರು ಭಾಗದಲ್ಲಿ  ಎಳ್ಳು ಎಂದೇ ಖ್ಯಾತವಾಗಿದೆ.

ಅಂದು ಬೆಳಗ್ಗೆ ಬೇಗನೆ ಎದ್ದು, ತೈಲಾಭ್ಯಂಜನ ಮಾಡಿ, ಕುಲದೇವರ ಮುಂದೆ ಮಡಿಯಲ್ಲಿ ಮಾಡಿದ ಎಳ್ಳು -ಬೆಲ್ಲ, ಸಕ್ಕರೆ ಅಚ್ಚನ್ನಿಟ್ಟು ನೇವೇದ್ಯ ಮಾಡಿ, ಮನೆಗೆ ಬಂದವರಿಗೆಲ್ಲಾ ಎಳ್ಳು ನೀಡಿ - ಒಳ್ಳೆಯ ಮಾತನಾಡಿ ಎನ್ನುವುದು ವಾಡಿಕೆ.

ಸಂಜೆ ೫ ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ (ಮಣಿ) ಹಾರ ಹಾಕಿಮನೆಯಲ್ಲಿ ಎಲಚಿ ಹಣ್ಣು ಹಾಗೂ ಹಣವನ್ನು ಮೇಲಕ್ಕೆ Kicchu Hayisuvudu, cow, ox, sankranthi, suggi, pongal, kannadaratna.comಎರಚಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹೇಳುತ್ತಾ ಮಕ್ಕಳಿಗೆ ಆರತಿ ಮಾಡುತ್ತಾರೆ. ಹೆಣ್ಣು ಮಕ್ಕಳು, ಹೊಸವಸ್ತ್ರ ತೊಟ್ಟು5;, ಅಲಂಕಾರ ಮಾಡಿಕೊಂಡು, ಮನೆ ಮನೆಗೆ ಹೋಗಿ ಎಳ್ಳು ಬೀರುತ್ತಾರೆ.

ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಸಂಕ್ರಾಂತಿ ಬಲು ಸಡಗರದ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್ ನಾಡಹಬ್ಬವಾಗಿ ಆಚರಿಸಲ್ಪಡುತ್ತದೆ. ಮೈಸೂರು ಭಾಗದಲ್ಲಿ ಸಂಕ್ರಾಂತಿಯ ಎಳ್ಳು ಬೀರುವ ಸೊಬಗು, ಸೊಗಸು ಬಲು ಚಂದ. ಆ ದಿನ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮಗ್ಗಿನ ಜಡೆ ಹಾಕಿಕೊಂಡು, ಹೊಸ ಸೀರೆಯುಟ್ಟು ಬಂಧು ಮಿತ್ರರ ಮನೆಗೆ ತೆರಳಿ ಕಬ್ಬಿನ ತುಂಡಿನ ಜೊತೆ ಎಳ್ಳು-ಬೆಲ್ಲ, ಕರ್ನಾಟಕದಲ್ಲಿದೆ. ಗಂಡು ಮಕ್ಕಳಾದವರು ಬೆಳ್ಳಿಯ ಕೃಷ್ಣನ ವಿಗ್ರಹವನ್ನೂ, ಹೆಣ್ಣು ಮಕ್ಕಳಾದವರು ಲಕ್ಷ್ಮೀ gopooja, suggi, pongal, sankranthi, kannadaratna.comವಿಗ್ರಹವನ್ನೂ ಎಳ್ಳಿನ ಜೊತೆ ಕೊಡುತ್ತಾರೆ. ಇನ್ನು ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಉದ್ದನೆಯ ರೇಷ್ಮೆಲಂಗ, ದಾವಣಿ ಧರಿಸಿ ಎಳ್ಳು ಬೀರಿ ಸಂಭ್ರಮಿಸುತ್ತಾರೆ. ಸಂಕ್ರಾಂತಿ ಮುನ್ನಾ ದಿನವನ್ನು ಬೋಗಿಹಬ್ಬ ಎಂದೂ6;, ಮಾರನೆ ದಿನ ಕನೂ ಹಬ್ಬ ಎಂದೂ ಆಚರಿಸಲಾಗುತ್ತದೆ. 

ಕರ್ನಾಟಕದಲ್ಲಿ ಈ ಹಬ್ಬವನ್ನು ಕೃತಜ್ಞತೆಯ ಸಂಕೇತವಾಗಿ ಆಚರಿಸಲಾಗುತ್ತದೆ. ದವಸ ಧಾನ್ಯ ನೀಡುವ ಭೂತಾಯಿಗೆ, ಧಾನ್ಯದ ರಾಶಿಗೆ, ಕೃಷಿ ಕಾರ್ಯಕ್ಕೆ ಪೂರಕವಾದ ಎತ್ತಿನ ಬಂಡಿಗೆ, ದನಗಳಿಗೆ ಅಲಂಕಾರ ಮಾಡಿ ಪೂಜಿಸುತ್ತಾರೆ. ಜಾನುವಾರುಗಳು ಬೆಚ್ಚದಿರಲಿ, ಬೆದರದಿರಲೆಂದು ಬೆಂಕಿಯ ಮೇಲೆ ಹಾರಿಸುತ್ತಾರೆ. ಕೆಲವೆಡೆ ದನ ಬಿಡುವ ಸಾಹಸ ಕ್ರೀಡೆಯೂ ನಡೆಯುತ್ತದೆ. ಸುಗ್ಗಿ ಸಮೃದ್ಧಿಯ ಸಂಕೇತವಾಗಿ ಆಚರಿಸುವ ಹಿಗ್ಗಿನ ಹಬ್ಬ. 

ಮುಖಪುಟ /ನಮ್ಮಹಬ್ಬಗಳು