|
ಏನು ಧನ್ಯಳೋ
‘ತುಳಸಿ’
ಎಂಥಾ ಮಾನ್ಯಳೋ... *ಶೋಭಾ ಸತೀಶ್
ಉತ್ಥಾನ ದ್ವಾದಶಿಗೆ ಕಿರು
ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ.
ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ,
ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ
ಎಂಬುದು ಹಿರಿಯರ ನಂಬಿಕೆ.
ತುಳಸಿ ಶ್ರೀಕೃಷ್ಣನಿಗೆ
ಅತ್ಯಂತ ಪ್ರಿಯ. ತುಳಸಿ,
ಪೂಜೆಗೂ ಶ್ರೇಷ್ಠ. ಅಂದು ತುಳಸಿಯ
ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ
ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ,
ತುಳಸಿಯ ಹಿರಿಮೆ: ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು -ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ. ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೇಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ, ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದುಷ್ಟಾಂತ.
ಸೂಫಿ ಪಂಥದಲ್ಲಿಯೂ ತುಳಸಿಯ ಪೂಜಿಸಲಾಗುತ್ತದೆ. ಅವರೂ ತುಳಸಿಗೆ ಮಾನ್ಯತೆ ನೀಡುತ್ತಾರೆ. ಜೈನರೂ ಪೂಜೆಗೆ ತುಳಸಿಯ ದಳ ಬಳಸುತ್ತಾರೆ. ಹಿಂದೂ ದೇವಾಲಯಗಳಲ್ಲಿ ತುಳಸಿ ಮಾಲೆಯಿಂದ ದೇವರನ್ನು ಅರ್ಚಿಸುತ್ತಾರೆ. | |||