|
ನಿಂದೇ
ಪರ್ವಾಗಿಲ್ಲ..
ಇಬ್ಬರು ಸ್ನೇಹಿತರು
ಮಾತಾಡ್ತಾ ಇದ್ರು. ಒಬ್ಬ ಹೇಳ್ದಾ ನೋಡಯ್ಯಾ ಮೊನ್ನೆ ನಾನೂ ನನ್ನ ಹೆಂಡತಿ ಮನೆಗೆ ಬರೋವಾಗ
ಸಣ್ಣ ಕಲ್ಲೊಂದು ನನ್ನ ಹೆಂಡತಿ ಕಣ್ಣಿಗೆ ಬಿತ್ತು. ಅದನ್ನ ತೆಗೆಸಕ್ಕೆ ಡಾಕ್ಟ್ರಗೆ ೧೦೦
ರುಪಾಯಿ ಖರ್ಚಾಯ್ತು.ಎರಡನೆಯವ ಹೇಳಿದ ನಿಂದೇ ಪರ್ವಾಗಿಲ್ಲ. ನಿನ್ನ ಹೆಂಡ್ತಿ ಕಣ್ಣಿಗೆ ಕಲ್ಲು
ಬಿತ್ತು. ಆದರೆ,
ನನ್ನ ಹೆಂಡತಿ ಕಣ್ಣಿಗೆ ರೇಷ್ಮೆ ಸೀರೆ ಬಿತ್ತು. ಅದನ್ನು ತೆಗಸಿಕೊಡಕ್ಕೆ
೫೦೦೦ ಖರ್ಚಾಯ್ತು.
ಯಾರನ್ನೂ ಮುಟ್ಟಲ್ಲ
ಗುಂಡ ಕಟಕಟೆಯಲ್ಲಿ
ಸಾಕ್ಷಿ ಹೇಳಲು ಬಂದು ನಿಂತಿದ್ದ. ವಕೀಲರು ಕೋರ್ಟ್ನಲ್ಲಿ ಸತ್ಯವನ್ನೇ ಹೇಳುತ್ತೇನೆ,
ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಗೀತೆಯನ್ನು ಮುಟ್ಟಿ
ಪ್ರಮಾಣ ಮಾಡು ಎಂದರು.
ಕೂಡಲೆ ಗುಂಡ ಹೇಳಿದ.
ಬೇಡ ಸ್ವಾಮಿ. ಖಂಡಿತ ಬೇಡ. ನಾನು ಯಾರನ್ನೂ ಮುಟ್ಟಲ್ಲ. ಕಳೆದ ವರ್ಷ ಗೊತ್ತಿಲ್ದೆ ಆ
ಲಕ್ಷ್ಮೀನ ಮುಟ್ಟಿ,
ಪಂಚಾಯ್ತಿಲಿ ಛಡಿ ಏಟು ತಿಂದಿದ್ದೆ. ಇಲ್ಲಿ ನಾನು ಯಾವ ಗೀತನ್ನೂ
ಮುಟ್ಟಲ್ಲ , ನನ್ನ ಬಿಟ್ಟು ಬಿಡಿ,
ನಾನು ಹಳ್ಳಿಗೆ ಹೋಗ್ತೀನಿ ಅಂದ.
ನೆಂಟಸ್ಥನ
ಮೀನನ್ನ,
ಕನಕ ಕೇಳಿದ್ಲು. ಆ ಕೊನೆ ಮನೆಗೆ ಹೊಸದಾಗಿ ಬಂದಿದ್ದಾರಲ್ಲ ಅವರು ನಿಮಗೆ
ನೆಂಟ್ರಾಗಬೇಕಂತೆ ಹೇಗೆ? ಮೀನಾ ಹೇಳಿದ್ಲು... ಓ ಅದ. ಅವರ ಮನೆ
ನಾಯಿ ಟಾಮೀನೂ, ನಮ್ಮನೆ ನಾಯಿ ಬ್ರೌನಿನೂ ಅವಳಿ ಜವಳಿ.
ಮನುಷ್ಯನ ಆಯಸ್ಸು -
ಏಷ್ಟು - ಏನು?
ಸೃಷ್ಟಿಕರ್ತನಾದ
ಬ್ರಹ್ಮದೇವ,
ಸೃಷ್ಟಿ ಕಾರ್ಯ ಆರಂಭಿಸಿದ ಹೊಸತರಲ್ಲಿ ಮನುಷ್ಯನಿಗೆ,
ಕತ್ತೆಗೆ, ನಾಯಿಗೆ ಹಾಗೂ ಗೂಬೆಗೆ ೪೦- ೪೦
ವರ್ಷ ವಯಸ್ಸು ನಿಗ ಮಾಡಿದನಂತೆ, ಗಾಬರಿಗೊಂಡ ಈ ಮೂರು ಪ್ರಾಣಿಗಳು
ಬ್ರಹ್ಮನ ಬಳಗೆ ಡೆಲಿಗೇಷನ್ ಹೋಗಿ, ತಂದೆಯೇ ಮನುಷ್ಯನಿಗೆ ಮಾತು
ಹೇಳಿಕೊಟ್ಟಿರುವೆ, ಬುದ್ಧಿ ಕೊಟ್ಟಿರುವೆ ಅವನಿಗೂ ನಮಗೂ ೪೦ -೪೦
ವರ್ಷ ವಯಸ್ಸು ಕೊಟ್ಟರೆ, ಅವನು ನಮ್ಮನ್ನು ಶೋಷಿಸುತ್ತಾನೆ.
ದಯಮಾಡಿ ನಮ್ಮ ಅರ್ಧ ಆಯಸ್ಸು ಕಡಿಮೆ ಮಾಡು ಎಂದು ಕೋರಿದವಂತೆ.
ಬ್ರಹ್ಮ ಆಗಬಹುದು.
ಆದರೆ ನಿಮ್ಮ ಅರ್ಧ ಆಯಸ್ಸನ್ನು ಮನುಷ್ಯ ತೆಗೆದುಕೊಂಡರೆ ಮಾತ್ರ ಅದು ಸಾಧ್ಯ ಎಂದನಂತೆ.
ಪ್ರಾಣಿಗಳೆಲ್ಲ ಮನುಷ್ಯನನ್ನು ಕೋರಿದವಂತೆ.ಮನುಷ್ಯ ಓಕೆ ಎಂದ.
ಅಂದಿನಿಂದ ಕತ್ತೆ,
ನಾಯಿ, ಗೂಬೆಗೆ ೨೦ ವರ್ಷವಷ್ಟೇ ಆಯಸ್ಸು.
ಮನುಷ್ಯನಿಗೆ ನೂರು. ಅದಕ್ಕೆ ಮನುಷ್ಯ ೪೦ ವರ್ಷ ಮನುಷ್ಯನಾಗೇ ಬದುಕುತ್ತಾನೆ. ೪೦ರಿಂದ ೬೦
ವರ್ಷ ಕತ್ತೆಯದು, ಅದಕ್ಕೆ ಮನೆ ಕಟ್ಟಬೇಕು,
ಮಗಳ ಮದುವೆ ಮಾಡಬೇಕು ಎಂದು ಕತ್ತೆಯಂತೆ ದುಡಿಯುತ್ತಾನೆ. ೬೦ರಿಂದ ೮೦ತ್ತು
ನಾಯಿಯ ವಯಸ್ಸು, ರಿಟೈರ್ ಬೇರೆ ಆಗಿರುತ್ತಾನೆ,
ಮಾಡಲು ಕೆಲಸ ಇಲ್ಲ ಹೀಗಾಗಿ ನಾಯಿಯಂತೆ ಅಲೆಯುತ್ತಾನೆ. ಇನ್ನು ೮೦ರಿಂದ
೧೦೦ ಗೂಬೆಯ ವಯಸ್ಸು, ಕೈಲಾಗದೆ ಮೂಲೆಯಲ್ಲಿ ಗೂಬೆಯಂತೆ
ಕುಳಿತಿರುತ್ತಾನಂತೆ.
ಸ್ನೇಹಿತರು
ಖಾಸಗಿ ಟಿ.ವಿ
ಚಾನೆಲ್ನಲ್ಲಿ ಕೋಟ್ಯಪತಿಯೊಬ್ಬರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗ್ತಿತ್ತು. ಸಂದರ್ಶಕರು
ಕೇಳಿದರು. ಬಡವರಾಗಿದ್ದ ನೀವು ಈಗ ಶ್ರೀಮಂತರಾಗಿದ್ದೀರಿ. ನೀವು ಬಡವರಾಗಿದ್ದಾಗ ಇದ್ದ ನಿಮ್ಮ
ಹಳೆ ಸ್ನೇಹಿತರು,
ಈಗ ಬಂದು ತೊಂದರೆ ಕೊಡುವುದಿಲ್ಲವೇ? ಶ್ರೀಮಂತ
ಉತ್ತರಿಸಿದ. ಇಲ್ಲ. ನಾನು ಬಡವನಾಗಿದ್ದಾಗ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ.
ದೀರ್ಘಸೇವೆಯ ರಹಸ್ಯ
ಒಂದು ದಿನ ಗುಂಡ ತನ್ನ
ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ
ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು
ತೊದಲಿದ.
ಮಾಲಿಕ ಅಂದ ನೀನು ಸಂಬಳ
ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೇಲಸ ಮಾಡ್ತಾ ಇರೋದು.

ಮತ್ತಷ್ಟು ಜೋಕುಗಳಿಗೆ ಕ್ಲಿಕ್
ಮಾಡಿ
|