ಮುಖಪುಟ /ಲೇಖನಮಾಲೆ 
 

30 ವರ್ಷಗಳ ಬಳಿಕ ಸ್ನೇಹ ಸಮ್ಮಿಲನ
1978-81ರವರೆಗೆ ತುಮಕೂರು ಜಿಲ್ಲೆ ತುರುವೇಕೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 8ರಿಂದ 10ನೇ ತರಗತಿವರೆಗೆ ಓದಿದ 20ಕ್ಕೂ ಹೆಚ್ಚು ಗೆಳೆಯರು 30 ವರ್ಷಗಳ ಬಳಿಕ ಶಾಲೆಯಲ್ಲೇ ಸೇರಿದ ಅಪೂರ್ವ ಕ್ಷಣ..

Turuvekere Frineds. ತುರುವೇಕೆರೆ ಗೆಳೆಯರು. ಐ.ಬಿ.ಎಂ. ಅನಿಲ, ಅಮೆರಿಕ ಮುಕುಂದ, ಕನ್ನಡರತ್ನ ಸತೀಶ, ಮೈಸೂರು ವಿ.ವಿ. ದ್ವಾರ್ಕಿ, ಎಂಪೋರಿಯಂ ನರೇಂದ್ರ ಸಾಹುಕಾರ ಎಸ್.ಎಂ. ಕುಮಾರ, ಸುನಿಲ, ಕೃಷ್ಣಸ್ವಾಮಿ, ಗೌಸ್, ಚಾರ್ಟರ್ಡ್ ಅಕೌಂಟೆಂಟ್ ವಾಗೀಶ, ಆರ್ಕಿಟೆಕ್ಟ್ ಚಂದ್ರಮೌಳಿ, ರಾಮಪುರಾಣಿಕ, ಕೌನ್ಸಿಲರ್ ನಾಗಭೂಷಣ, ಪ್ರೊಫೆಸರ್ ನಜೀರ್, ಮೋಹನ, ಈಶ್ವರ್, ಗೌಸ್, ವಿರೂಪಾಕ್ಷ, ಆನಂದ,ಬೆಂಗಳೂರು, ಮೇ ೩೦ : ನಾವೆಲ್ಲರೂ ಶಾಲೆಗಳಲ್ಲಿ ಓದಿದವರೆ. ಆಗ ತರಗತಿಯಲ್ಲಿರುವವರೆಲ್ಲಾ ನಮ್ಮ ಸ್ನೇಹಿತರೆ. ಆದರೆ ಈ ಸ್ನೇಹ ಎಷ್ಟು ದಿನ? ಶಾಲೆ ಬಿಟ್ಟು, ಕಾಲೇಜು ಸೇರಿದ ಬಳಿಕ, ಉದ್ಯೋಗಕ್ಕೆ ಸೇರಿ ಮದುವೆ, ಮಕ್ಕಳಾದ ಬಳಿಕ ಯಾಂತ್ರಿಕ ಬದುಕಿನ ಜಂಜಾಟಕ್ಕೆ ಸಿಲುಕುವ ನಾವು ಶಾಲೆಯ ದಿನಗಳ ಗೆಳೆಯರು ಸಿಕ್ಕರೆ ಹಾಯ್ ಬಾಯ್ ಎಂದು ಹೇಳಿ ಹೊರಟು ಹೋಗುತ್ತೇವೆ.ಒಬ್ಬಿಬ್ಬರ ನಡುವೆ ಸ್ನೇಹ ಉಳಿಸಿಕೊಂಡರೂ ಬಹುತೇಕರನ್ನು ಮರೆತು ಬಿಡುತ್ತೇವೆ.

ಆದರೆ, ಮೇ ೨೯ರ ಭಾನುವಾರ ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ನಡೆದದ್ದು ಅಪೂರ್ವ ಸಂಗಮ. ಅದೊಂದು ಅಪೂರ್ವ ಕ್ಷಣ. ೩೦ ವರ್ಷಗಳ ಬಳಿಕ ಸರ್ಕಾರಿ ಶಾಲೆಯಲ್ಲಿ ಓದಿದ ಗೆಳೆಯರೆಲ್ಲಾ ತಾವು ಓದಿದ ಶಾಲೆಯಲ್ಲೇ ಸೇರಿದ ಅಪರೂಪದ ಕ್ಷಣ. ಅದೊಂದು ಅಪೂರ್ವ ಸಮ್ಮಿಲನ.

೧೯೭೮-೮೧ರ ಅವಧಿಯಲ್ಲಿ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ೮, ೯ ಹಾಗೂ ೧೦ನೇ ತರಗತಿ ಓದಿದ ೨೦ಕ್ಕೂ ಹೆಚ್ಚು ಹಳೆಯ Turuvekere Frineds. ತುರುವೇಕೆರೆ ಗೆಳೆಯರು. ಐ.ಬಿ.ಎಂ. ಅನಿಲ, ಅಮೆರಿಕ ಮುಕುಂದ, ಕನ್ನಡರತ್ನ ಸತೀಶ, ಮೈಸೂರು ವಿ.ವಿ. ದ್ವಾರ್ಕಿ, ಎಂಪೋರಿಯಂ ನರೇಂದ್ರ ಸಾಹುಕಾರ ಎಸ್.ಎಂ. ಕುಮಾರ, ಸುನಿಲ, ಕೃಷ್ಣಸ್ವಾಮಿ, ಗೌಸ್, ಚಾರ್ಟರ್ಡ್ ಅಕೌಂಟೆಂಟ್ ವಾಗೀಶ, ಆರ್ಕಿಟೆಕ್ಟ್ ಚಂದ್ರಮೌಳಿ, ರಾಮಪುರಾಣಿಕ, ಕೌನ್ಸಿಲರ್ ನಾಗಭೂಷಣ, ಪ್ರೊಫೆಸರ್ ನಜೀರ್, ಮೋಹನ, ಈಶ್ವರ್, ಗೌಸ್, ವಿರೂಪಾಕ್ಷ, ಆನಂದ,ವಿದ್ಯಾರ್ಥಿಗಳು ಒಂದೆಡೆ ಕಲೆತಿದ್ದರು. ಒಬ್ಬರನ್ನೊಬ್ಬರು ತಬ್ಬಿ, ಕೈಕುಲುಕಿ ಕುಣಿದು ಕುಪ್ಪಳಿಸಿದರು. ತಾವು ಕುಳಿತ ಕೊಠಡಿ, ತಾವು ಆಡಿದ ಮೈದಾನಕ್ಕೆ ಹೋಗಿ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ಶಾಲೆಯ ಆವರಣದಲ್ಲಿ ಗಂಟೆ ಗಟ್ಟಲೆ ಕಳೆದು, ತಮ್ಮ ತಮ್ಮ ಸಾಧನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ಮಧುರ ಭೇಟಿ ಇಲ್ಲಿಗೇ ಮುಗಿಯಬಾರದು ಎಂದು ವರ್ಷಕ್ಕೊಮ್ಮೆ ಮೇ ಕೊನೆಯ ಭಾನುವಾರ ಸೇರುವ ನಿರ್ಣಯ ಕೈಗೊಂಡರು.

ಬಡ ವಿದ್ಯಾರ್ಥಿಗಳ ನೆರವು ನಿಧಿ ತಾವೆಲ್ಲರೂ ಸೇರಿ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ, ತಮ್ಮ ಕೈಲಾದಷ್ಟು ಹಣ ದೇಣಿಗೆ ನೀಡಿ ಆ ಹಣದಿಂದ ತಾವೇ ಓದಿದ ಶಾಲೆಯಲ್ಲಿ ಕಲಿಯುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲು ತೀರ್ಮಾನಿಸಿದರು.

Turuvekere Frineds. ತುರುವೇಕೆರೆ ಗೆಳೆಯರು. ಐ.ಬಿ.ಎಂ. ಅನಿಲ, ಅಮೆರಿಕ ಮುಕುಂದ, ಕನ್ನಡರತ್ನ ಸತೀಶ, ಮೈಸೂರು ವಿ.ವಿ. ದ್ವಾರ್ಕಿ, ಎಂಪೋರಿಯಂ ನರೇಂದ್ರ ಸಾಹುಕಾರ ಎಸ್.ಎಂ. ಕುಮಾರ, ಸುನಿಲ, ಕೃಷ್ಣಸ್ವಾಮಿ, ಗೌಸ್, ಚಾರ್ಟರ್ಡ್ ಅಕೌಂಟೆಂಟ್ ವಾಗೀಶ, ಆರ್ಕಿಟೆಕ್ಟ್ ಚಂದ್ರಮೌಳಿ, ರಾಮಪುರಾಣಿಕ, ಕೌನ್ಸಿಲರ್ ನಾಗಭೂಷಣ, ಪ್ರೊಫೆಸರ್ ನಜೀರ್, ಮೋಹನ, ಈಶ್ವರ್, ಗೌಸ್, ವಿರೂಪಾಕ್ಷ, ಆನಂದ,ಅಮೆರಿಕಾ, ಹಾಸನ, ತುಮಕೂರು, ಬೆಂಗಳೂರು, ತಿಪಟೂರು, ಮೈಸೂರು ಹೀಗೆ ವಿವಿಧ ಊರುಗಳಿಂದ ಬಂದ ಈ ಎಲ್ಲ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿದ್ದೇ ಒಂದು  ವಿಸ್ಮಯ. ಕನ್ನಡರತ್ನ.ಕಾಂನ ಸಂಪಾದಕ ತುರುವೇಕೆರೆ ಸತೀಶ್ ತಮ್ಮೂರಿನ ಬಗ್ಗೆ ಬರೆದಿದ್ದ ಲೇಖನ ಓದಿದ ಐ.ಬಿ.ಎಂ. ಉದ್ಯೋಗಿ ಅನಿಲ್ ಆರಾಧ್ಯ ಅಮೆರಿಕಾದಿಂದ ಇ ಮೇಲ್ ಕಳಿಸಿ, ತಾವೂ ತುರುವೇಕೆರೆಯವರೆಂದು ಹೇಳಿಕೊಂಡಾಗಲೇ ಇವರಿಬ್ಬರೂ ಕ್ಲಾಸ್‌ಮೇಟ್‌ಗಳೆಂಬುದು ತಿಳಿದಿದ್ದು, ಈ ಇಬ್ಬರು ಇತರ ಗೆಳೆಯರ ಹುಡುಕಾಟ ಮಾಡಿದ ಫಲವಾಗಿ ನಾಲ್ಕಾರು ಸ್ನೇಹಿತರು ಸೇರಿದರು. ಫೇಸ್ ಬುಕ್‌ನಲ್ಲಿ ತಮ್ಮ ಗೆಳೆಯ ಮುಕುಂದನಿಗೆ ಹುಡುಕಿದಾಗ ಅಮೆರಿಕದಲ್ಲಿರುವ ಮುಕುಂದ ಗೆಳೆಯರನ್ನು ನೋಡಲು ಬೆಂಗಳೂರಿಗೆ ಬರಲು ಉತ್ಸುಕನಾದ.

ಬೆಂಗಳೂರಿನಲ್ಲಿಯೇ ಇರುವ ಸಾಫ್ಟ್‌ವೇರ್ ಉದ್ಯೋಗಿ ಅನಿಲ, ಪತ್ರಕರ್ತ ಕನ್ನಡರತ್ನ.ಕಾಂ ಸಂಪಾದಕ ಟಿ.ಎಂ.ಸತೀಶ, ಆರ್ಕಿಟೆಕ್ಟ್ ಚಂದ್ರಮೌಳಿ, ಚಾರ್ಟರ್ಡ್ ಅಕೌಂಟೆಂಟ್ ವಾಗೀಶ, ಬೆಂಗಳೂರು ವಿ.ವಿ.ಯಲ್ಲಿ ಪ್ರಾಧ್ಯಾಪಕರಾದ ನಜೀರ್, ಖಾಸಗಿ ಸಂಸ್ಥೆ ಉದ್ಯೋಗಿ ಗುರುದೇವ, Turuvekere Frineds. ತುರುವೇಕೆರೆ ಗೆಳೆಯರು. ಐ.ಬಿ.ಎಂ. ಅನಿಲ, ಅಮೆರಿಕ ಮುಕುಂದ, ಕನ್ನಡರತ್ನ ಸತೀಶ, ಮೈಸೂರು ವಿ.ವಿ. ದ್ವಾರ್ಕಿ, ಎಂಪೋರಿಯಂ ನರೇಂದ್ರ ಸಾಹುಕಾರ ಎಸ್.ಎಂ. ಕುಮಾರ, ಸುನಿಲ, ಕೃಷ್ಣಸ್ವಾಮಿ, ಗೌಸ್, ಚಾರ್ಟರ್ಡ್ ಅಕೌಂಟೆಂಟ್ ವಾಗೀಶ, ಆರ್ಕಿಟೆಕ್ಟ್ ಚಂದ್ರಮೌಳಿ, ರಾಮಪುರಾಣಿಕ, ಕೌನ್ಸಿಲರ್ ನಾಗಭೂಷಣ, ಪ್ರೊಫೆಸರ್ ನಜೀರ್, ಮೋಹನ, ಈಶ್ವರ್, ಗೌಸ್, ವಿರೂಪಾಕ್ಷ, ಆನಂದ,ರಮೇಶ ಪುರಾಣಿಕ, ಡಿಫೆನ್ಸ್ ಉದ್ಯೋಗಿ ಚಂದ್ರಶೇಖರ, ಹಾಸನದ ಎಫ್.ಕೆ.ಸಿ.ಸಿ.ಐನ ಮ್ಯಾನೇಜರ್ ಆಗಿರುವ ಮೋಹನ, ತುಮಕೂರಿನ ಮಾಜಿ ನಗರಸಭಾ ಸದಸ್ಯ ನಾಗಭೂಷಣ, ಮೈಸೂರು ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ದ್ವಾರಕನಾಥ, ತುರುವೇಕೆರೆಯಲ್ಲಿಯೇ ಇರುವ ಸಾಹುಕಾರ ಎಸ್.ಎಂ.ಕುಮಾರ್, ನರೇಂದ್ರ ಎಂಪೋರಿಯಂನ ಮಾಲಿಕ ನರೇಂದ್ರ ಬಾಬು ಹಾಗೂ ಈಶ್ವರ್, ಗೌಸ್, ವಿರೂಪಾಕ್ಷ, ಆನಂದ, ಸುನಿಲ್, ಕೃಷ್ಣಸ್ವಾಮಿ, ಅಮೆರಿಕಾದಿಂದ ಆಗಮಿಸಿದ ಮುಕುಂದ ಎಲ್ಲರೂ ಸೇರಿ ಬಾಲ್ಯದ ನೆನಪುಗಳನ್ನು ಮೆಲಕುಹಾಕಿದರು.

ತಾವು ಓದುತ್ತಿದ್ದ ಕಾಲದಲ್ಲಿ ಪಡೆಯಲಾರದ ಗ್ರೂಪ್ ಫೋಟೋವನ್ನು ೩೦ ವರ್ಷಗಳ ಬಳಿಕ ತಮ್ಮದಾಗಿಸಿಕೊಂಡರು. ತಮ್ಮ ತಮ್ಮ ಮೊಬೈಲ್‌ಗಳಲ್ಲಿ, ಹ್ಯಾಂಡಿಕ್ಯಾಂಗಳಲ್ಲಿ ಸೆರೆಹಿಡಿದರು.

ಮುಖಪುಟ /ಲೇಖನಮಾಲೆ