|
ಮುಖಪುಟ
/ಸುದ್ದಿ
ಸಮಾಚಾರ
ಬಿಜೆಪಿ ಜೊತೆ ಮತ್ತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ - ಕುಮಾರಸ್ವಾಮಿ
ಬೆಂಗಳೂರು,
ಆಗಸ್ಟ್೧
- ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಜೊತೆಗೂಡಿ ಸರ್ಕಾರ ಮಾಡುತ್ತದೆ ಎಂಬ ಬಗ್ಗೆ
ಪತ್ರಿಕೆಗಳಲ್ಲಿ ಓದಿದ್ದೇನೆ. ಇಂಥ ಯಾವುದೇ ಪ್ರಕ್ರಿಯೆ ರಾಜ್ಯದಲ್ಲಿ ನಡೆದಿಲ್ಲ.
ಮಿಗಿಲಾಗಿ ಬಿಜೆಪಿ ಜೊತೆ ಜೆಡಿಎಸ್ ಮತ್ತ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ
ಮುಖ್ಯಮಂತ್ರಿ,
ಜಾತ್ಯತೀತ
ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ -
ಜೆಡಿಎಸ್ ಮೈತ್ರಿ ಕುರಿತಂತೆ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಇದು
ಅಪ್ರಬುದ್ಧ ರಾಜಕಾರಣಿಯ ಹೇಳಿಕೆ ಎಂದು ಬಣ್ಣಿಸಿದ ಅವರು,
ಇದಕ್ಕೆ
ಮಹತ್ವ ನೀಡವುದು ಬೇಡ ಎಂದರು. ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ಮುನ್ನ
ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಸೇರುವುದಿಲ್ಲ.
ಮಿಗಿಲಾಗಿ ಮೈತ್ರಿ ಮಾಡಿಕೊಳ್ಳುವಂಥ ಪರಿಸ್ಥಿತಿಯೂ ರಾಜ್ಯದಲ್ಲಿ ಉದ್ಭವಿಸಿಲ್ಲ. ಈಗ ಆ
ಚರ್ಚೆಯೇ ಅಪ್ರಸ್ತುತ ಎಂದರು.
ಯಾವುದೇ ಪಕ್ಷ
ಜೆಡಿಎಸ್ ಅನ್ನು ಟೇಕಿಟ್ ಫಾರ್ ಗ್ರಾಟೆಂಡ್ ಎನ್ನುವಂತೆ ಬಳಸಿಕೊಳ್ಳಲು ಬಿಡುವುದಿಲ್ಲ
ಎಂದ ಕುಮಾರಸ್ವಾಮಿ,
ಈ ಸಂಬಂಧ
ತಮ್ಮ ಪಕ್ಷದ ಕೆಲವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಈ
ವಿಚಾರದಲ್ಲಿ ತಮ್ಮ ಹಾಗೂ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಸ್ಪಷ್ಟಪಡಿಸಿದರು.
ರೆಡ್ಡಿ ಸೋದರರು
ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದಾಗ,
ಮೊದಲಿಗೆ
ತಾವು ಪಾದಯಾತ್ರೆ ಮಾಡುವುದಾಗಿ ಹೇಳಿಕೆ ನೀಡಿದ್ದಾಗಿ ಹೇಳಿದ ಅವರು,
ಇದನ್ನು
ಕಾಂಗ್ರೆಸ್ ಬಳಸಿಕೊಂಡಿತು ಎಂದೂ ಹೇಳಿದರು.
ರಾಜ್ಯದಲ್ಲಿ
ಪಕ್ಷವನ್ನು ಸಂಘಟಿಸುವ ಕುರಿತಂತೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ
ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲಿ ಸಮಾಲೋಚಿಸಲಾಗುವುದು ಎಂದರು.
ಮುಖಪುಟ
/ಸುದ್ದಿ
ಸಮಾಚಾರ
|