| |
ಮುಖಪುಟ
/ಸುದ್ದಿ
ಸಮಾಚಾರ
ದೆಹಲಿಯಲ್ಲಿ ಜನವರಿ
6ರಂದು
ಮುಖ್ಯಮಂತ್ರಿಗಳ ಸಭೆ
ಬೆಂಗಳೂರು,
ಡಿ. ೧೯ :
ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ೨೦೦೯ರ ಜನವರಿ ೬ರಂದು ಪ್ರಧಾನ ಮಂತ್ರಿಯವರ
ಅಧ್ಯಕ್ಷತೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ಕೇಂದ್ರ
ಗೃಹ ಸಚಿವ ಶ್ರೀ ಪಿ.ಚಿದಂಬರಂ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಶ್ರೀ ಬಿ.ಎಸ್.
ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಈ ವಿಷಯ ತಿಳಿಸಿರುವ ಚಿದಂಬರಂ,
ಭಯೋತ್ಪಾದನೆ ನಿಗ್ರಹಕ್ಕೆ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಾದ
ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ:
-
ರಾಜ್ಯ ಸರ್ಕಾರವು ಗುಪ್ತಚರ
ಮಾಹಿತಿ ಸಂಗ್ರಹ ಹಾಗೂ ಹಂಚಿಕೆಗೆ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣಾ
ಕೊಠಡಿಯನ್ನು ಸ್ಥಾಪಿಸಿ,
ಡಿವೈಎಸ್ಪಿ/ಎಸ್ಪಿ ಹಂತದ ಅಧಿಕಾರಿಯನ್ನು ನೇಮಕ ಮಾಡಬೇಕು.
-
ರಾಜ್ಯ ಗುಪ್ತಚರ ವಿಭಾಗವು
ವಿಶ್ಲೇಷಕರ ತಂಡವನ್ನು ರಚಿಸಿ,
ಸಂಗ್ರಹಿಸಲಾದ ಮಾಹಿತಿಯನ್ನು ವಿಶ್ಲೇಷಿಸಿ,
ಸಲಹೆ, ಅಭಿಪ್ರಾಯಗಳನ್ನು
ಮಂಡಿಸಬೇಕು.
-
ನಿಯಂತ್ರಣಾ ಕೊಠಡಿ ಹಾಗೂ
ವಿಶ್ಲೇಷಕರ ತಂಡವು ತಮ್ಮಲ್ಲಿರುವ ಮಾಹಿತಿಯನ್ನು ಕ್ಷಿಪ್ರಗತಿಯಲ್ಲಿ ಕೇಂದ್ರ
ಸರ್ಕಾರಕ್ಕೆ ರವಾನಿಸಬೇಕು.
-
ಮುಖ್ಯಮಂತ್ರಿಯವರು ಹಾಗೂ ಗೃಹ
ಸಚಿವರು ಮುಖ್ಯಕಾರ್ಯದರ್ಶಿ,
ಗೃಹ ಕಾರ್ಯದರ್ಶಿ, ಡಿಜಿಪಿ,
ಗುಪ್ತಚರ ವಿಭಾಗದ ಮುಖ್ಯಸ್ಥರು ಹಾಗೂ ರಾಜಧಾನಿಯ ಪೊಲೀಸ್
ಆಯುಕ್ತರೊಂದಿಗೆ ಸಭೆ ನಡೆಸಿ ಭದ್ರತಾ ವಿಷಯಗಳ ಕುರಿತು ಪ್ರತಿ ದಿನ ಬೆಳಿಗ್ಗೆ
ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು.
-
ಮುಖ್ಯಮಂತ್ರಿ ಅಥವಾ ಗೃಹ
ಸಚಿವರು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು,
ಐಜಿ, ಎಸ್ಪಿ ಅವರೊಂದಿಗೆ ಭದ್ರತಾ
ವ್ಯವಸ್ಥೆ ಕುರಿತು ಸಭೆ ನಡೆಸಬೇಕು.
-
ರಾಜ್ಯದ ಎಲ್ಲಾ ಪ್ರಮುಖ
ನಗರಗಳಲ್ಲಿ ಮಾಫಿಯಾ ಗ್ಯಾಂಗ್,
ಸುಲಿಗೆಕೋರರು, ಭೂಗಳ್ಳರು,
ವಂಚಕರನ್ನು ಮಟ್ಟಹಾಕಬೇಕು.
-
ರಾಜ್ಯದ ಪ್ರಮುಖ ಸ್ಥಳಗಳು,
ಸ್ಮಾರಕಗಳು, ಕಟ್ಟಡಗಳ ಭದ್ರತಾ
ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇಂಥ ಸ್ಥಳಗಳಲ್ಲಿ ಕಮಾಂಡೋಗಳ ಸಣ್ಣ
ಪಡೆಯನ್ನು ನೇಮಕ ಮಾಡಬೇಕು. ಕಮಾಂಡೋ ತರಬೇತಿ ನೀಡಲು ಕೇಂದ್ರ ಸರ್ಕಾರ ನೆರವು
ನೀಡುವುದು.
-
ರಾಜ್ಯದ ಪ್ರಮುಖ
ನಗರಗಳಲ್ಲಿರುವ ಪ್ರಮುಖ ಖಾಸಗಿ ಸಂಸ್ಥೆಗಳು,
ಹೆಚ್ಚು ಜನಸಂದಣಿಯಿರುವ ಸ್ಥಳಗಳನ್ನು ಗುರುತಿಸಿ,
ಅವುಗಳ ಮಾಲೀಕರಿಗೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು
ಮಾಡಿಕೊಳ್ಳುವಂತೆ ಸೂಚನೆ ನೀಡಬೇಕು.
ಮುಖಪುಟ
/ಸುದ್ದಿ
ಸಮಾಚಾರ |
|
|