|
ಮುಖಪುಟ
/ಸುದ್ದಿ
ಸಮಾಚಾರ
ನೆನಪುಗಳ ಮಾತು ಮಧುರ, ನೆನಪುಗಳ
ಭಾವ ಅಮರ....
ಆದರೆ ಇಂದು ಬೆಂಗಳೂರಿನಲ್ಲೊಂದು ಅಪರೂಪದ ಕಾರ್ಯಕ್ರಮ. ಪಿ.ಇ.ಎಸ್. ಕಾಲೇಜಿನಲ್ಲಿ ಪಿ.ಯು.ಸಿ.ಯಿಂದ, ವಾಣಿಜ್ಯ ಪದವಿ ಪಡೆಯುವವರೆಗೆ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿದ 70 ವಿದ್ಯಾರ್ಥಿಗಳ ಪೈಕಿ 30 ಸಹಪಾಠಿಗಳು ಒಂದೇ ವೇದಿಕೆಯಲ್ಲಿ ಕಲೆತು ತಮ್ಮ, ತಮ್ಮ ಮಕ್ಕಳ ಸಾಧನೆಯ ಬಗ್ಗೆ ಪರಸ್ಪರ ಪರಿಚಯ ಮಾಡಿಕೊಂಡರು.
ಇಂಥ ಒಂದು ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದು, ಜಿ.ಕೆ.ಟಿ. ಪ್ರಸನ್ನ, ಎ.ವಿ. ವೇಣುಗೋಪಾಲ್, ಬಿ.ಎ. ಮಂಜುನಾಥ್ ಹಾಗೂ ಶ್ರೀಧರ್. ಇವರು ತಮ್ಮ ಸಹಪಾಠಿ ಶಾಂತಲಾ, ಅನುಪಮಾ ಅವರ ನೆರವಿನಿಂದ 1982ರಿಂದ87ರವರೆಗೆ ತಮ್ಮೊಂದಿಗೆ ಪಿ.ಇ.ಎಸ್. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಗೆಳೆಯರ ದೂರವಾಣಿ ಸಂಖ್ಯೆಗಳನ್ನು ಕಲೆ ಹಾಕಿದರು.
ಈ ಅಪರೂಪದ ಸ್ನೇಹ ಸಮ್ಮಿಲನದಲ್ಲಿ ಜಿ.ಕೆ.ಟಿ. ಪ್ರಸನ್ನ, ಎ.ವಿ. ವೇಣುಗೋಪಾಲ್, ಶ್ರೀನಗರ ಶ್ರೀಧರ್, ಕೆ.ಎಸ್.ಎಸ್. ಪ್ರಕಾಶ್, ಶ್ರೀಧರ, ಟಿ.ಎಂ. ಸತೀಶ್, ಶ್ರೀನಿವಾಸ ಮಯ್ಯ, ಕೃಷ್ಣ, ಸುರೇಶ್, ಮಂಜುನಾಥ್, ತಟ್ಟನಹಳ್ಳಿ ನಾಗೇಶ, ಸುಶೀಂದರ್ ಪ್ರಸಾದ್ ಸ್ಟ್ಯಾನ್ಲಿ, ಕೃಷ್ಣಕುಮಾರ್, ಆರ್.ಜಿ.ಪ್ರಸಾದ್, ಏಕಾಂತರಾಜು, ಎಚ್ ಪಿ. ಸುರೇಶ್, ಶಾಂತಲಾ, ಅನುಪಮಾ, ಸುದರ್ಶಿನಿ, ತಾರಾ, ಸುಜಾತ, ಸುಧಾಮಣಿ, ಸುಧಾಮಣಿ ಬಿ.ಪಿ., ಕಾಂತಾ, ಹರಿಣಿ, ಲೀಲಾವತಿ, ಕವಿತಾ ಮತ್ತಿತರರು ಪಾಲ್ಗೊಂಡಿದ್ದರು. | |||