|
ಮುಖಪುಟ
/ಸುದ್ದಿ
ಸಮಾಚಾರ ಚುನಾವಣೆ ನೆರಳಲ್ಲಿ ಜನಪರ ರೈಲ್ವೆ ಬಜೆಟ್ ಮಂಡನೆ
2009-10ನೇ ಸಾಲಿನ ಈ ಮುಂಗಡಪತ್ರದ ಮೊದಲ ನಾಲ್ಕು ತಿಂಗಳಿಗೆ ಅವರು ಲೇಖಾನುದಾನ ನೀಡುವಂತೆ ಲೋಕಸಭೆಯನ್ನು ಕೋರಿದರು. ಲಾಲೂ ಪ್ರಸಾದ್ ಯಾದವ್ ಎಂದಿನಂತೆ ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಬಜೆಟ್ ಮಂಡಿಸಿದ್ದು, ರೈಲು ಪ್ರಯಾಣ ದರದಲ್ಲಿ ಶೇ.2ರಷ್ಟು ಇಳಿಕೆ ಮಾಡಿದ್ದಾರೆ. ಚೆನ್ನೈ -ಬೆಂಗಳೂರು ಬುಲೆಟ್ ಟ್ರೈನ್, ಬಳ್ಳಾರಿಯ ತೋರಣಗಲ್ –ರಂಜಿತ್ಪುರ ಮತ್ತು ಹೊಸಪೇಟೆ – ಸ್ವಾಮಿಹಳ್ಳಿ ನಡುವೆ ಜೋಡಿ ಮಾರ್ಗ ಪ್ರಸ್ತಾಪ ಮಾಡಿದ್ದಾರೆ. ಮೈಸೂರು- ಯಶವಂತರಪುರ ನಡುವೆ ನೂತನ ಎಕ್ಸ್ ಪ್ರೆಸ್, ಮುಂಬೈ- ಕಾರವಾರ ನಡುವೆ ಸೂಪರ್ ಫಾಸ್ಟ್ ರೈಲು, ವಾರಕ್ಕೆ 3 ಬಾರಿ ನಿಜಾಮುದ್ದೀನ್ -ಬೆಂಗಳೂರು ನಡುವೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಪ್ರಸ್ತಾಪ ಮಾಡಿದ್ದಾರೆ. ರೈಲ್ವೆ ಮುಂಗಡ ಪತ್ರದ ಇತರ ಮುಖ್ಯಾಂಶಗಳು ಇಂತಿವೆ. · 5 ವರ್ಷಗಳಲ್ಲಿ ರೈಲ್ವೆ ಅಪಘಾತಗಳ ಸಂಖ್ಯೆ ಗಣನೀಯ ಇಳಿಮುಖ. · 2007-08ರಲ್ಲಿ ಅಪಘಾತಗಳ ಸಂಖ್ಯೆ 195ಕ್ಕೆ ಇಳಿಕೆ. · ಸರಕು ಸಾಗಣೆಯಲ್ಲಿ ಶೇ.8 ರಷ್ಟು ಪ್ರಗತಿ. · ಹಲವು ಮಾರ್ಗಗಳಿಗೆ ರೈಲ್ವೆ ಸೌಲಭ್ಯ ವಿಸ್ತರಣೆ · ದೆಹಲಿ – ಹಾಲ್ದಿಯಾ ನಡುವೆ ಬುಲೆಟ್ ಟ್ರೈನ್ · ಐದುವರ್ಷಗಳಲ್ಲಿ2.3ಲಕ್ಷ ಬಂಡವಾಳ ನಿರೀಕ್ಷೆ. · 43 ಹೊಸ ಪ್ರಯಾಣಿಕ ರೈಲು ಸಂಚಾರ · ಕರ್ನಾಟಕಕ್ಕೆ 2 ನೂತನ ರೈಲು ಮಂಜೂರು. · ಮೇಲ್ ಟ್ರೈನ್ ಗಳ ಪ್ರಯಾಣ ದರದಲ್ಲಿ ಇಳಿಕೆ. · ರೈಲ್ವೆ ವಿಚಾರಣೆಗೆ ನಾಲ್ಕು ಕಾಲ್ ಸೆಂಟರ್ ಸ್ಥಾಪನೆ. · ಸರಕು ಸಾಗಣೆ ಸಾಮರ್ಥ್ಯ ಶೇ.78 ರಷ್ಟು ವೃದ್ಧಿ. · ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ. ಎಲ್ಲ ಗ್ರಾಹಕ ಸೇವೆಗಳ ಮೇಲ್ದರ್ಜೆ. · 5 ವರ್ಷಗಳಲ್ಲಿ 90 ಸಾವಿರ ಕೋಟಿ ರುಪಾಯಿ ಆದಾಯ. · ಆನ್ ಲೈನ್ ನಲ್ಲಿ ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ. · ರೈಲ್ವೆ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸು ಶೀಘ್ರ ಜಾರಿ. · ನೌಕರರ ವೇತನಕ್ಕಾಗಿ 9 ಸಾವಿರ ಕೋಟಿ ರು ವೆಚ್ಚ. · ಮುಂದಿನ ವರ್ಷ 10,576 ಕೋಟಿ ರುಪಾಯಿ ಲಾಭ ನಿರೀಕ್ಷೆ. · 19,000 ಕೋಟಿ ದಾಟಿದ ರೈಲ್ವೆ ಇಲಾಖೆಯ ಲಾಭ · ಮುಂದಿನ 5 ವರ್ಷದಲ್ಲಿ 2.3 ಲಕ್ಷ ಕೋಟಿ ಹೂಡಿಕೆ. · ರೈಲ್ವೆಯಲ್ಲೂ ಡಬಲ್ ಡೆಕ್ಕರ್ ಸರಕು ಸಾಗಣೆ ವ್ಯವಸ್ಥೆ. · ಲೂಧಿಯಾನದಿಂದ -ಕೊಲ್ಕತ್ತಾ ವರೆಗೆ ಪೂರ್ವ ಸರಕು ಸಾಗಣೆ ಕಾರಿಡಾರ್. | |||