|
ಮುಖಪುಟ
/ಸುದ್ದಿ
ಸಮಾಚಾರ 2009-10ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿಂದು ನಾಲ್ಕನೆ ಬಾರಿ ಹಾಗೂ ಬಿಜೆಪಿ ಸರ್ಕಾರದ 2ನೇ ಆಯವ್ಯಯ ಮಂಡಿಸಿದರು. ಬೆಂಗಳೂರು ಮಹಾನಗರದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಖಾಸಗಿ, ಸಾರ್ವಜನಿಕ ವಲಯದ ಪಾಲುದಾರಿಕೆ. 2 ಸಾವಿರ ಕೋಟಿ ರೂಪಾಯಿ ವಿಶೇಷ ಯೋಜನೆ ಸೇರಿದಂತೆ ಹಲವು ಯೋಜನೆ ಪ್ರಕಟಿಸಿದರು. ಬಜೆಟ್ ಮುಖ್ಯಾಂಶ Ø ಬೆಂಗಳೂರು ನಗರ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಬಜೆಟ್ ನಲ್ಲಿ ಒತ್ತು. Ø ಬೆಂಗಳೂರು ಅಭಿವೃದ್ಧಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 800 ಕೋಟಿ ರೂ, ಬಿಡಿಎ ಗೆ 300 ಕೋಟಿ ರೂಪಾಯಿ. Ø ಕಾವೇರಿ 4ನೇ ಭಾಗದ, 2ನೇ ಹಂತದ ಕಾಮಗಾರಿಗೆ 300 ಕೋಟಿ ರೂಪಾಯಿ. Ø ನಮ್ಮ ಮೆಟ್ರೋ ಯೋಜನೆಗೆ ರಾಜ್ಯದ ಪಾಲಿನ ಬಂಡವಾಳ 600 ಕೋಟಿ ರೂಪಾಯಿ ನೀಡಿಕೆ. Ø ಬೆಂಗಳೂರು ನಗರ ಸಾರಿಗೆ ಸೌಲಭ್ಯ ಆಧುನೀಕರಣಕ್ಕೆ 500 ಕೋಟಿ ರೂಪಾಯಿ. Ø ಬಿಡಿಎ ವತಿಯಿಂದ ನಿರ್ಮಿಸಲುದ್ದೇಶಿಸಿರುವ 10 ಪಥಗಳ ಜಂಕ್ಷನ್ ರಹಿತ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 700 ಕೋಟಿ ರೂಪಾಯಿ. Ø ಬೆಳಗಾವಿ ಸುವರ್ಣಸೌಧ ನಿರ್ಮಾಣಕ್ಕೆ 100 ಕೋಟಿ ರೂಪಾಯಿ. Ø ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ, ಮೈಸೂರು ವಿಮಾನ ನಿಲ್ದಾಣಗಳ ನಿರ್ಮಾಣ, ಅಭಿವೃದ್ಧಿಗೆ 100 ಕೋಟಿ ರೂಪಾಯಿ. Ø ನಿವೃತ್ತ ಪತ್ರಕರ್ತರ ಮಾಸಾಶನ ನೀಡಿಕೆ ಆದಾಯ ಮಿತಿ 5 ಸಾವಿರದಿಂದ 50 ಸಾವಿರಕ್ಕೆ ಏರಿಕೆ. Ø ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 6 ಕೋಟಿ ರೂಪಾಯಿ ಅನುದಾನ. Ø ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 180 ಕೋಟಿ ರೂಪಾಯಿ, ನಂದಿಬೆಟ್ಟ, ಕೆಮ್ಮಣ್ಣುಗುಂಡಿ, ಕೊಡಚಾದ್ರಿ ಗಿರಿಧಾಮಗಳ ಅಭಿವೃದ್ಧಿಗೆ 10 ಕೋಟಿ ರೂಪಾಯಿ. Ø ಕಾರವಾರದ ಟ್ಯಾಗೂರ್ ಬೀಚ್ ಅಭಿವೃದ್ಧಿಗೆ 5 ಕೋಟಿ ರೂ. ಕೃಷ್ಣರಾಜಸಾಗರ, ಬೃಂದಾವನ ಉದ್ಯಾನ ನವೀಕರಣಕ್ಕೆ 5 ಕೋಟಿ ರೂ. ಮೈಸೂರು ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ. Ø ತುಮಕೂರು ವಿಶ್ವವಿದ್ಯಾಲಯಕ್ಕೆ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು. Ø ಪ್ರತಿ ಜಿಲ್ಲೆಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಅಭಿವೃದ್ಧಿಗೆ ಸಾವಿರ ಕೋಟಿ ರೂ. ವೆಚ್ಚ. Ø ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಜಾರಿಗೆ ಪ್ರತ್ಯೇಕ ಶೀರ್ಷಿಕೆಯಡಿ ಅನುದಾನ ಹಂಚಿಕೆ ಮತ್ತು ಅನುಷ್ಠಾನಕ್ಕೆ ವಿಶೇಷ ಒತ್ತು. Ø ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳಿಂದ ಶೇ. 3ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಿಕೆ ಯೋಜನೆ. Ø ಕೌಶಲ್ಯಾಭಿವೃದ್ಧಿ ಮೂಲಕ ಯುವಜನರಿಗೆ ಉದ್ಯೋಗಾರ್ಹತೆ ಹೆಚ್ಚಿಸಲು ವ್ಯಾಪಕ ಕ್ರಮ, ತರಬೇತಿಗೆ 100 ಕೋಟಿ ರೂ. Ø ಸಾವಯವ ಕೃಷಿ ಜನಪ್ರಿಯಗೊಳಿಸಲು ಯೋಜನೆ - 100 ಕೋಟಿ ರೂಪಾಯಿ ಅನುದಾನ. Ø 10 ಸಾವಿರ ಕಿಲೋ ಮೀಟರ್ ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ಮತ್ತು 12 ಸಾವಿರದ 600 ಕಿಲೋ ಮೀಟರ್ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು. Ø ಸರ್ಕಾರದ ಯೋಜನೆಗಳ ಅನುಷ್ಠಾನದ ಸುಧಾರಣೆಗೆ ಖಾಸಗಿ ಕ್ಷೇತ್ರಗಳ ಪರಿಣತರು ಮತ್ತು ತಜ್ಞರ ಅನುಭವ, ಜ್ಞಾನದ ನೆರವು ಪಡೆಯಲು ಸರ್ಕಾರದ ನಿರ್ಧಾರ, ವಿಷಯವಾರು ಕಾರ್ಯಪಡೆಗಳ ನೇಮಕ Ø ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಕುಗ್ಗದ ರಾಜ್ಯ ಯೋಜನಾ ಗಾತ್ರ. 2009-10ರ ಸಾಲಿಗೆ 29 ಸಾವಿರದ 500 ಕೋಟಿ ರೂ.ಗೆ ಹೆಚ್ಚಳ. Ø ಇತಿ ಮಿತಿಯೊಳಗೆ ಕೈಗಾರಿಕಾ ಬೆಳವಣಿಗೆ, ಉದ್ಯೋಗ ನಷ್ಟ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಕ್ರಮ – ಮುಖ್ಯಮಂತ್ರಿ. Ø ನಾಡಿನ ಭಾವೈಕ್ಯ ಕೇಂದ್ರಗಳನ್ನು ಬಲಪಡಿಸಿ, ರಾಜ್ಯದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಮುಂಗಡ ಪತ್ರದಲ್ಲಿ ಚಿಂತನೆ. Ø ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲ್ ಭೀತಿ ನಿಗ್ರಹಕ್ಕೆ ಪ್ರಸಕ್ತ ವರ್ಷ 3ಸಾವಿರದ 840 ಪೊಲೀಸ್ ಸಿಬ್ಬಂದಿ ನೇಮಕ – ಯಡಿಯೂರಪ್ಪ. Ø ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ರಾಜ್ಯದ ಕ್ರೀಡಾಪಟುಗಳಿಗೆ ಲಕ್ಷ ರೂ. ಪ್ರೋತ್ಸಾಹ ಧನ – ಸರ್ಕಾರದ ಘೋಷಣೆ. | |||