|
ಮುಖಪುಟ
/ಸುದ್ದಿ
ಸಮಾಚಾರ ವಿದ್ಯುತ್ ನೀರಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ; ಯಡಿಯೂರಪ್ಪ
ಉಡುಪಿ ಜಿಲ್ಲೆ ಹೊಸಂಗಡಿ ಬಳಿಯ ಯೋಜನಾ ಪ್ರದೇಶದಲ್ಲಿಂದು 230 ಮೆ.ವಾ. ಸಾಮರ್ಥ್ಯದ ವಾರಾಹಿ ಜಲ ವಿದ್ಯುತ್ ಯೋಜನೆಯ 2 ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಯೋಜನೆಯಿಂದ ರಾಜ್ಯಕ್ಕೆ 230 ಮೆ.ವಾ. ಹೆಚ್ಚುವರಿ ವಿದ್ಯುತ್ ಲಭಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ 1.25 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಒಂದೇ ವರ್ಷದ ಅವಧಿಯಲ್ಲಿ ನಾವು ಯೋಜನೆಗೆ ಮಾಡಿರುವ ವೆಚ್ಚ ಸರಿದೂಗಿ ಲಾಭ ತರಲಿದೆ ಎಂದರು.
ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಮಾತನಾಡಿ, ಬೆಳಗಿನ ಮತ್ತು ಸಂಜೆಯ ವಿದ್ಯುತ್ ಒತ್ತಡದ ಸಮಯದ ಬೇಡಿಕೆ ಪೂರೈಸಲು ವಾರಾಹಿ 2ನೇ ಹಂತದ ಯೋಜನೆ ಸಹಕಾರಿ ಎಂದರು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸ್ಥಳೀಯ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು. | |||