|
ಮುಖಪುಟ
/ಸುದ್ದಿ
ಸಮಾಚಾರ
ಲಾಲ್ಬಾಗ್ನಲ್ಲಿ 26ರವರೆಗೆ ಫಲಪುಷ್ಪ ಪ್ರದರ್ಶನ
ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಲಾಲ್ಬಾಗ್ ಗಾಜಿನ ಮನೆ ಹಾಗೂ ಡಾ. ಎಂ.ಎಚ್. ಮರಿಗೌಡ ಸ್ಮಾರಕ ಭವನವನ್ನು ಪ್ರವಾಸಿತಾಣವಾಗಿ ಮಾರ್ಪಡಿಸಿದೆ. ಮೈಸೂರು ಉದ್ಯಾನ ಕಲಾ ಸಂಘ ಪ್ರತಿವರ್ಷದಂತೆ ಈ ವರ್ಷ ಕೂಡ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ವ್ಯವಸ್ಥೆಗೊಳಿಸಿದ್ದು, ಈ ಪ್ರದರ್ಶನದಲ್ಲಿ 225ಕ್ಕೂ ಹೆಚ್ಚು ಪ್ರಬೇಧದ ವಿವಿಧ ಬಗೆಯ ಹಣ್ಣು, ತರಕಾರಿ, ಅಲಂಕಾರಿಕ ಗಿಡಗಳು ವಿನೂತನ ವಿನ್ಯಾಸಗಳಿಂದ ಕಂಗೊಳಿಸಲಿವೆ. ಕೆಂಪು – ಬಿಳಿ ಗುಲಾಬಿಯಿಂದ ನಿರ್ಮಿಸಿರುವ ಗೋಲ, ಶಂಖದಲ್ಲಿ ಪಲ್ಲವಿಸಿರುವ ಬಗೆಬಗೆಯ ಪುಷ್ಪಗಳು, ಗಿರಿಧಾಮದಲ್ಲಿ ಮಾತ್ರವೇ ಅರಳಿ ಪರಿಮಳ ಸೂಸುವ ವನಸುಮಗಳು ಎಲ್ಲರ ಮನಸೆಳೆಯುತ್ತಿವೆ. ಚಳಿಗಾಲದಲ್ಲಷ್ಟೇ ಅರಳುವ ಅಪರೂಪದ ಪುಷ್ಪಗಳೂ ಜನಾಕರ್ಷಣೆಯ ಕೇಂದ್ರಬಿಂದುವಾಗಿವೆ. ವಿವಿಧ ಸಂಸ್ಥೆಗಳು, ಸಂಘಗಳು, ಪ್ರದರ್ಶನ -ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿವೆ. ಇಕೆಬಾನ, ತರಕಾರಿ ಕೆತ್ತನೆ, ಫಲಗಳ ಜೋಡಣೆ, ರಂಗವಲ್ಲಿಸ್ಪರ್ಧೆಯೇ ಮೊದಲಾದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಒಂದು ವಾರಗಳ ಕಾಲ ಈ ಪುಷ್ಪ ಪ್ರದರ್ಶನ ಜರುಗಲಿದೆ. 24ರಂದು ಶಾಲಾ ಮಕ್ಕಳಿಗೆ ಬೆಳಗ್ಗೆ ಉಚಿತ ಪ್ರವೇಶ ಎಂದು ತೋಟಗಾರಿಕೆ ಇಲಾಖೆ ಪ್ರಕಟಿಸಿದೆ. 240 ಎಕರೆ ಪ್ರದೇಶದಲ್ಲಿ , ಸಾವಿರಾರು ಬಗೆಯ ಹೂಗಿಡ, ಮರ, ಬಳ್ಳಿಗಳಿಂದ ಕೂಡಿ ಸಮೃದ್ಧವಾದ ಸುಂದರ ಲಾಲ್ಬಾಗ್ ಉದ್ಯಾನದಲ್ಲಿ ತಂಡಿ ಸಡಕ್, ಪುಷ್ಪ ಗಡಿಯಾರ, ಗಾಜಿನ ಮನೆ, ಕೆಂಪೇಗೌಡರ ಗೋಪುರವನ್ನೂ ನೋಡಬಹುದು. | |||