|
01, ಜುಲೈ 2010 ಬುಧವಾರದ ಸುದ್ದಿ ಮುಖ್ಯಾಂಶಗಳು ¨ ಆಲಮಟ್ಟಿ ಅಣೆಕಟ್ಟೆ ಎತ್ತರ ವಿವಾದ. ಮರು ಸಮೀಕ್ಷೆ ನಡೆಸಬೇಕೆಂಬ ಆಂಧ್ರ ಸರ್ಕಾರದ ಅರ್ಜಿ ತಿರಸ್ಕರಿಸಿದ ಕೃಷ್ಣ ನ್ಯಾಯಾಧಿಕರಣ. ಕರ್ನಾಟಕಕ್ಕೆ ಸಂದ ಮೊದಲ ಜಯ. ¨ ವಿಧಾನಸೌಧಕ್ಕೆ ಇಸ್ರೇಲ್ ರಾಯಭಾರಿ ನೇತೃತ್ವದ ತಂಡ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ. ¨ ವಿಧಾನಸಭೆ ಕಲಾಪ ಆರಂಭ. ಮತ್ತೆ ಲೋಕಾಯುಕ್ತರಾಜೀನಾಮೆ ವಿಚಾರ ಪ್ರಸ್ತಾಪ. ¨ ನಿಯಮ 60ರ ಅಡಿ ಚರ್ಚೆಗೆ ಅವಕಾಶ ನೀಡಲು ಸ್ಪೀಕರ್ ನಕಾರ. ಚರ್ಚೆಗೆ ಅವಕಾಶ ನೀಡಲು ಪ್ರತಿಪಕ್ಷಗಳ ಪಟ್ಟು. ಸದನದ ಬಾವಿಗಿಳಿದು ಪ್ರತಿಭಟನೆ. ಕಲಾಪ ಮುಂದೂಡಿಕೆ ¨ ಬಡ ಜನರಿಗೆ ಹಂಚಲು ಈ ವರ್ಷ 2 ಲಕ್ಷ ನಿವೇಶನ ಸಿದ್ಧಗೊಳ್ಳಲಿದೆ - ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು. ¨ ಟಿ. ನರಸೀಪುರಬಳಿ ಕಪಿಲಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ 40 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು - ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ರವಾನೆ. ¨ ಕೇಂದ್ರ ಚುನಾವಣಾ ಆಯೋಗ ತಮ್ಮಿಂದ ವಿವರಣೆ ಕೋರಿದೆ ಅಷ್ಟೇ ಅದು ಅನರ್ಹತೆ ನೋಟಿಸ್ ಅಲ್ಲ - ಸಚಿವ ಜನಾರ್ದನರೆಡ್ಡಿ. ¨ ಮೂರು ವರ್ಷದಲ್ಲಿ ರಾಜ್ಯದಲ್ಲಿ ವಿದ್ಯುತ್ ಸ್ವಾವಲಂಬನೆ - ಮುಖ್ಯಮಂತ್ರಿ ವಿಶ್ವಾಸದ ನುಡಿ. ¨ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ. ಚಾಮರಾಜನಗರ, ಮೈಸೂರು, ಮಂಡ್ಯ ಹಾಗೂ ಹಾಸನ ವಲಯದಲ್ಲಿ ಶಾಂತಿಯುತ ಶೇ.55ರಷ್ಟು ದಾನ. ¨ ರಾಜ್ಯ ವಿಧಾನಮಂಡಳದ ಉಭಯ ಸದನಗಳು ಅಂಗೀಕರಿಸಿರುವ 15 ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಒಪ್ಪಿಗೆ - ವಿಧಾನಸಭೆಯಲ್ಲಿ ಕಾರ್ಯದರ್ಶಿ ಎಸ್.ಬಿ. ಪಾಟೀಲ್ ಹೇಳಿಕೆ. ¨ ಕೇಂದ್ರ ಚುನಾವಣಾ ಆಯೋಗ ತಮ್ಮಿಂದ ವಿವರಣೆ ಕೋರಿದೆ ಅಷ್ಟೇ ಅದು ಅನರ್ಹತೆ ನೋಟಿಸ್ ಅಲ್ಲ - ಸಚಿವ ಜನಾರ್ದನರೆಡ್ಡಿ. ¨ ಮೂರು ವರ್ಷದಲ್ಲಿ ರಾಜ್ಯದಲ್ಲಿ ವಿದ್ಯುತ್ ಸ್ವಾವಲಂಬನೆ - ಮುಖ್ಯಮಂತ್ರಿ ವಿಶ್ವಾಸದ ನುಡಿ. ¨ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಾಳೆ ಸಚಿವರ ಗುಂಪಿನ ಸಭೆ - ಜಾತಿ ಆಧಾರಿತ ಜನಗಣತಿ ಕುರಿತಂತೆ ಪರಾಮರ್ಶೆ. ¨ ರಾಜ್ಯ ಸರ್ಕಾರ ವಿಧಾನಸಭಾಧ್ಯಕ್ಷರ ಮೇಲೆ ಪ್ರಭಾವ ಬೀರುತ್ತಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ. ¨ ರಾಜ್ಯದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಸರ್ಕಾರದ ಆದ್ಯತೆ. ಕೆಟ್ಟು ಹೋಗಿರುವ ಟ್ರಾನ್ಸ್ ಫಾರ್ಮರ್ ಬದಲಾವಣೆಗೆ ಶೀಘ್ರವೇ ಹೊಸ ಟ್ರಾನ್ಸ್ ಫಾರ್ಮರ್ ಪೂರೈಕೆ - ಮುಖ್ಯಮಂತ್ರಿ. ¨ ಬಿಬಿಎಂಪಿ ಪ್ರದೇಶದಲ್ಲಿ ಜಾಹೀರಾತು ಫಲಕ ಅಳವಡಿಕೆ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸದಿರಲು - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೀರ್ಮಾನ. ¨ ಅನಾರೋಗ್ಯದಿಂದ ಬಳಲುತ್ತಿರುವ ಕಡೂರು ಶಾಸಕ ಕೆ.ಎಂ. ಕೃಷ್ಣಮೂರ್ತಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ. ¨ ಭ್ರಷ್ಟಾಚಾರವನ್ನು ತಡೆಗಟ್ಟಲು ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಮಂತ್ರಿಗಳಿಗೆ ಯಡಿಯೂರಪ್ಪ ಮನವಿ. ¨ ಹಣಕೋಣ ವಿದ್ಯುತ್ ಸ್ಥಾವರಕ್ಕೆ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮತಿ ನಿರಾಕರಣೆ. ¨ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ರಾಜೀನಾಮೆಯಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ - ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ¨ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೊಸ ಉದ್ದಿಮೆಗಳಿಗೆ ಬೇಡಿಕೆ ಬಂದಿದ್ದರೂ ರೈತರಿಗೆ ಪೂರೈಸುವ ವಿದ್ಯುತ್ ನಲ್ಲಿ ಕಡಿತ ಮಾಡುವುದಿಲ್ಲ - ಸರ್ಕಾರದ ಹೇಳಿಕೆ. ¨ ರಾಜ್ಯದಲ್ಲಿ ಬಿತ್ತನೆ ಬೀಜ ವಿತರಣೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ - ಸಚಿವ ಎಸ್.ಎ. ರವೀಂದ್ರನಾಥ್. ¨ ಕಳೆದ ಮೇ 22ರಂದು ಭೀಕರ ವಿಮಾನ ದುರಂತ ಸಂಭವಿಸಿದ ಬಜ್ಪೆ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸುವುದಿಲ್ಲ - ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯದ ಸ್ಪಷ್ಟನೆ. ¨ ವಿಶ್ವವಿದ್ಯಾಲಯಗಳ ಬೋಧಕರು ಹಾಗೂ ಕಾಲೇಜುಗಳ ಮೌಲ್ಯೀಕರಣಕ್ಕೆ ಹೊಸ ನಿಯಮಾವಳಿ ಜಾರಿ.
| |||