ಮುಖಪುಟ /ಸುದ್ದಿ ಸಮಾಚಾರ   

ಜೂನ್ 30, 2010 ಮಂಗಳವಾರದ ಸುದ್ದಿ ಮುಖ್ಯಾಂಶಗಳು

¨      ವಿಧಾನಸಭೆಯಲ್ಲಿ ಮಾರ್ದನಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ರಾಜೀನಾಮೆ ಕಾಂಗ್ರೆಸ್ ಪ್ರಸ್ತಾಪ. ಸಮಗ್ರ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು.

¨      ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸದನದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಜೆಡಿಎಸ್ ನಿರ್ಧಾರ - ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ.

¨      ಬೇಲೇಕೆರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಯಾಯ ತನಿಖೆ - ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅತೃಪ್ತಿ

¨      ಕೆ.ಎಂ.ಎಫ್.ಗೆ ಸಂಸತ್ ಸದಸ್ಯ ಸದಾನಂದ ಗೌಡ ನೀಡಿರುವ ರಾಜೀನಾಮೆ ಆಂತರಿಕ ವಿಷಯ. ಈ ಬಗ್ಗೆ ನಾವು ಪಕ್ಷ ಮಟ್ಟದಲ್ಲಿ ಕುಳಿತು ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ - ಸಚಿವ ಆರ್. ಅಶೋಕ.

¨      ಬೇಲೇಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಕಬ್ಬಿಣದ ಅದಿರು ನಾಪತ್ತೆ ಪ್ರಕರಣ ಹಿನ್ನೆಲೆಯಲ್ಲಿ  ಬೇಲೇಕೆರಿ, ಮಂಗಳೂರು, ಕಾರವಾರ ಬಂದರಿನಲ್ಲಿ ರಫ್ತು ಚಟುವಟಿಕೆಗೆ ನಿಷೇಧ ಹೇರುವಂತೆ ಹೈಕೋರ್ಟ್ ಗೆ ಲೋಕಾಯುಕ್ತ ಮನವಿ.

¨      ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯ. ಜುಲೈ 5 ಅಥವಾ 7ರಂದು ವಿಧಾನ ಪರಿಷತ್ ಸಭಾಪತಿ ಚುನಾವಣೆ ನಡೆಸಲು ತೀರ್ಮಾನ.

¨      ಚಿಕ್ಕಮಗಳೂರು ಜಿಲ್ಲೆ ದತ್ತಾತ್ರೇಯ ಪೀಠ, ಮುಳ್ಳಯ್ಯನಗಿರಿ ಹಾಗೂ ಮಾಣಿಕ್ಯಧಾರಾ ಇನ್ನು ಮುಂದೆ ಪ್ಲಾಸ್ಟಿಕ್ ಮುಕ್ತ ಪ್ರದೇಶ - ಜಿಲ್ಲಾಧಿಕಾರಿ ಆದೇಶ.

¨      ಬೆಂಗಳೂರಿನ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ -  ಸ್ಪಷ್ಟನೆ ಕೇಳಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್.

 ಮುಖಪುಟ /ಸುದ್ದಿ ಸಮಾಚಾರ