|
ಮುಖಪುಟ
/ಸುದ್ದಿ
ಸಮಾಚಾರ ಗರಿಗೆದರಿದ ಚಲನಚಿತ್ರ ಅಮೃತ ಮಹೋತ್ಸವ ಸಂಭ್ರಮ
ತಿಳಿನೀಲಾಗಸದಲ್ಲಿ ಭಾನುವಾರ ಸಂಜೆ ತಾರೆಗಳು ಮಿನುಗುತ್ತಿದ್ದರೆ, ಈ ಆಕರ್ಷಕ ವೇದಿಕೆಯಲ್ಲಿ ಕನ್ನಡಚಿತ್ರ ತಾರೆಯರು ರಾರಾಜಿಸುತ್ತಿದ್ದರು. ಮೇರೆ ಮೀರಿದ ಅಭಿಮಾನಿಗಳ ಉತ್ಸಾಹದ ನಡುವೆ ಚಿತ್ರನಟ ನಟಿಯರು ಹಾಡಿ, ನರ್ತಿಸಿ ಅಭಿಮಾನಿಗಳ ಮನಗೆದ್ದರು. ಬಣ್ಣ ಬಣ್ಣದ ಲೇಸರ್ ಬೆಳಕಿನ ಚಿತ್ತಾರ, ಲಕ್ಷಾಂತರ ಮಂದಿಯ ಕಿವಿ ತಲುಪುವಂತೆ ಹಾಕಲಾಗಿದ್ದ ಧ್ವನಿತರಂಗ, ಧ್ವನಿಬೆಳಗಿನ ಆಯೋಜನೆ ಎಲ್ಲರ ಮನಸೆಳೆಯಿತು.
ಆದರೆ ಪೂರ್ಣಚಂದ್ರನಲ್ಲೂ ಕಪ್ಪು ಕಳಂಕವಿರುವಂತೆ ಈ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಅವ್ಯವಸ್ಥೆಯೇ ಹೈಲೈಟ್ ಆದದ್ದು ಮಾತ್ರ ದುರಂತ. | |||