ಮುಖಪುಟ /ಸುದ್ದಿ ಸಮಾಚಾರ

ಕನ್ನಡರತ್ನ ಸತೀಶ್ ಗೆ ಮಾಧ್ಯಮ ಅಕಾಡಮಿ ಪ್ರಶಸ್ತಿ

೨೦೧೦ ಮತ್ತು ೨೦೧೧  ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

T.M. Satish, ತುರುವೇಕೆರೆ ಸತೀಶ್, Turuvekere Satish, Satish Turuvekere, T.M. Satish,  Kannadaratna Satish, T.M.Satish, Karnataka Media academy awards.ಬೆಂಗಳೂರು, ನ ೩ : ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ೨೦೧೦ ಮತ್ತು ೨೦೧೧  ನೇ ಸಾಲಿನ ಪ್ರಶಸ್ತಿ ಪ್ರಕಟಿಸಿದ್ದು, ಕನ್ನಡರತ್ನ.ಕಾಂ ಗೌರವ ಸಂಪಾದಕ ಹಾಗೂ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನ ಪತ್ರಿಕೆಯ ಸಹ ಸಂಪಾದಕ ಟಿ.ಎಂ. ಸತೀಶ್ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ದಿನಪತ್ರಿಕೆಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಅಂತರ್ಜಾಲ ಪತ್ರಿಕೋದ್ಯಮಕ್ಕೆ ಕಾಲಿಟ್ಟು, ಕನ್ನಡರತ್ನ.ಕಾಂ ಗೌರವ ಸಂಪಾದಕರಾಗಿರುವ ಸತೀಶ್, ಪ್ರಸ್ತುತ ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಿದ್ದಾರೆ.

ಪ್ರಚಲಿತ, ಹಲೋ ಗೆಳೆಯರೆ, ಜೀವನದರ್ಶನ ಸೇರಿದಂತೆ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಬೆಂಗಳೂರು ದೂರದರ್ಶನದಲ್ಲಿ ನಡೆಸಿಕೊಟ್ಟಿರುವ ಸತೀಶ್ ಪತ್ರಿಕೋದ್ಯಮಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡಮಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಶೇಷ ಪ್ರಶಸ್ತಿ: ಶ್ರೀ ಜಿ.ಎನ್. ರಂಗನಾಥರಾವ್, ಹಿರಿಯ ಪತ್ರಕರ್ತರು, ೨೦೧೦, ಶ್ರೀ ಅರಕೆರೆ ಜಯರಾಂ  ಹಿರಿಯ ಪತ್ರಕರ್ತರು ೨೦೧೧-೧೧, ವರ್ಷದ ವ್ಯಕ್ತಿ ಪ್ರಶಸ್ತಿ : ಶ್ರೀ ಎಸ್.ಆರ್. ರಾಮಸ್ವಾಮಿ, ಹಿರಿಯ ಪತ್ರಕರ್ತರು  - ೨೦೧೦ ಶ್ರೀ ಹುಣಸವಾಡಿ ರಾಜನ್, ಸಂಪಾದಕರು, ಸಂಯುಕ್ತ ಕರ್ನಾಟಕ ೨೦೧೧-೧೧-೦೩, ಮೈಸೂರು ದಿಗಂತ ಪ್ರಶಸ್ತಿ ಪುರಸ್ಕೃತರು: ಶ್ರೀಮತಿ ಭಾರತಿ ಹೆಗಡೆ, ಉದಯವಾಣಿ ೨೦೧೦, ಶ್ರೀ ಟಿ.ಎಲ್ ಶ್ರೀನಿವಾಸ್, ಕನ್ನಡ ಪ್ರಭ  ೨೦೧೧

ಆಂದೋಲನ ಪ್ರಶಸ್ತಿ ಪುರಸ್ಕೃತರು ೧) ಲೋಕದರ್ಶನ ದಿನ ಪತ್ರಿಕೆ ಬೆಳಗಾವಿ ೨೦೧೦, ೨)   ಸುದ್ದಿ ಬಿಡುಗಡೆ ಪತ್ರಿಕೆ ಸುಳ್ಯ, ೨೦೧೧ ಅಭಿಮಾನಿ ಪ್ರಶಸ್ತಿ: ಶ್ರೀ ಎಸ್.ಎನ್. ಸುರೇಶ್, ಸಂಯುಕ್ತ ಕರ್ನಾಟಕ ೨೦೧೦, ಶ್ರೀ ಕೆ. ನರಸಿಂಹಮೂರ್ತಿ, ಪ್ರಜಾವಾಣಿ ೨೦೧೧-೧೧
ಗೌರವ ಪ್ರಶಸ್ತಿ ಪುರಸ್ಕೃತರು

೧) ಶ್ರೀ ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತರು   ೨) ಶ್ರೀ ರಾಜಾರಾವ್, ಹಿರಿಯ ಪತ್ರಕರ್ತರು,   ೩) ಶ್ರೀ ಸಿ.ಜಿ. ಹಂಪಣ್ಣನವರ್, ಹಿರಿಯ ಪತ್ರಕರ್ತರು  ೪) ಶ್ರೀ ಟಿ.ಎಂ. ಸತೀಶ್, ಹಿರಿಯ ಪತ್ರಕರ್ತರು, ಕನ್ನಡರತ್ನ.ಕಾಂ. ೫)  ಶ್ರೀಮತಿ ಯು ಬಿ ರಾಜಲಕ್ಷ್ಮಿ, ಹಿರಿಯ ಪತ್ರಕರ್ತರು   ೬) ಶ್ರೀ ಅಬ್ದುಲ್ ಹಫೀಜ್, ಛಾಯಾಚಿತ್ರಗಾರರು   ೭) ಶ್ರೀ ಬಿ. ಶಾಂತಾರಾಂ, ಹಿರಿಯ ಪತ್ರಕರ್ತರು ಹೊಸದಿಗಂತ೮) ಶ್ರೀ ಈಶ್ವರ್ ಶೆಟ್ಟರ್, ಹಿರಿಯ ಪತ್ರಕರ್ತರು, ಉದಯ ಟಿ.ವಿ.  ೯) ಶ್ರೀ ಬಿ.ಪಿ. ಮಲ್ಲಪ್ಪ, ಮುಖ್ಯ ವರದಿಗಾರರು, ಸಂಜೆ ವಾಣಿ  ೧೦)  ಶ್ರೀ ಶ್ರೀಕಾಂತಾಚಾರ್ ಮಣ್ಣೂರು ಹಿರಿಯ ಪತ್ರಕರ್ತರು, ಗುಲ್ಬರ್ಗಾ   ೧೧) ಶ್ರೀ ಅರುಣ್‌ಕುಮಾರ್ ಹಬ್ಬೂರ್ ಹಿರಿಯ ಪತ್ರಕರ್ತರು   ೧೨) ಶ್ರೀ ಬಾಲಕೃಷ್ಣ ಪುತ್ತಿಗೆ, ಮುಖ್ಯ ವರದಿಗಾರರು ಪ್ರಜಾವಾಣಿ  ೧೩) ಶ್ರೀ ಹೆಚ್.ಎಸ್. ಪುಟ್ಟಸ್ವಾಮಿ, ಹಿರೇಮಗಳೂರು ವರದಿಗಾರರು, ವಿಜಯ ಕರ್ನಾಟಕ    ೧೪) ಶ್ರೀ ಸುಂದರ್ ಕೆ. ಜನಶ್ರೀ ವಾಹಿನಿ    ೧೫) ಶ್ರೀ ಯು. ವಿ. ಜಾರ್ಜ್ ಹಿರಿಯ ಪತ್ರಕರ್ತರು ೧೬) ಶ್ರೀ ಲಕ್ಷಣ್ ಕೊಡಸೆ, ಹಿರಿಯ ಪತ್ರಕರ್ತರು  ೧೭) ಶ್ರೀ ದಿನೇಶ್ ಅಮೀನ್ ಮಟ್ಟು , ಸಹಾಯಕ ಸಂಪಾದಕರು ಪ್ರಜಾವಾಣಿ   ೧೮)  ಶ್ರೀ ಸಂಗಮ್‌ದೇವ್, ಹಿರಿಯ ಪತ್ರಕರ್ತರು ೧೯) ಶ್ರೀ ರುದ್ರಣ್ಣ ಹರ್ತಿಕೋಟೆ  ಹಿರಿಯ ಪತ್ರಕರ್ತರು  ೨೦) ಶ್ರೀಮತಿ ವಿಜಯಲಕ್ಷ್ಮೀ ಶಿಬರೂರು  ಸುವರ್ಣ ಟಿವಿ  ೨೧ ) ಶ್ರೀಮತಿ ಶಮಂತ ಪತ್ರಕರ್ತರು೨೨) ಶ್ರೀ ರೇಚಾ ರೇವಡಿಗರ  ಹಿರಿಯ ಪತ್ರಕರ್ತರು      ೨೩ ) ಶ್ರೀ ಎಸ್.ಕೆ. ಕೊನೆಸಾಗರ, ಹಿರಿಯ ಪತ್ರಕರ್ತರು  ೨೪) ಶ್ರೀ ರವೀಂದ್ರ ಭಟ್ಟ, ಐನಕೈ , ಹಿರಿಯ ಪತ್ರಕರ್ತರು  ೨೫) ಶ್ರೀ ಅಂ.ಶಿ. ಪ್ರಸನ್ನಕುಮಾರ್, ಹಿರಿಯ ವಿಶೇಷ ವರದಿಗಾರರು, ಕನ್ನಡ ಪ್ರಭಾ   ೨೬ ) ವಿ.ಜಿ. ನರೇಂದ್ರ ಹಿರಿಯ ವ್ಯಂಗ್ಯ ಚಿತ್ರಕಾರರು  ೨೭) ಶ್ರೀ ರಂಗನಾಥ್ ಭಾರದ್ವಾಜ್ ಸುವರ್ಣ ವಾಹಿನಿ  ೨೮) ಶ್ರೀ ಡಿ. ಎಸ್. ಕುಲಕರ್ಣಿ ಹಿರಿಯ ಪತ್ರಕರ್ತರು   ೨೯) ಶ್ರೀ ಕೆ.ವಿ. ಪ್ರಬಾಕರ್, ಮುಖ್ಯ ವರದಿಗಾರರು, ಕನ್ನಡ ಪ್ರಭ   ೩೦) ಶ್ರೀ ಕೆ.ಎಂ. ಶಿವರಾಜ್, ಹಿರಿಯ ಪತ್ರಕರ್ತರು, ಮೈಸೂರು ಮಿತ್ರ  ೩೧) ಶ್ರೀ ಆರ್.ಟಿ. ವಿಠ್ಠಲಮೂರ್ತಿ ಹಿರಿಯ ಪತ್ರಕರ್ತರು, ಆಂದೋಲನ೩೨ ) ಶ್ರೀ ನಟರಾಜ್, ಉದಯ ವಾಹಿನಿ  ೩೩) ಶ್ರೀಮತಿ ಪಾರ್ವತಿ ಮೆನನ್, ಹಿರಿಯ ಪತ್ರಕರ್ತರು ದಿ ಹಿಂದೂ  ೩೪) ಶ್ರೀ ರೆಹಮಾನ್, ಟಿ.ವಿ. ೯  ೩೫) ಶ್ರೀ ಜಿ.ಕೆ. ಸತ್ಯ, ಹಿರಿಯ ಪತ್ರಕರ್ತರು, ೩೬) ಶ್ರೀ ಜೆ.ಬಿ. ಶ್ಯಾಮಸುಂದರ , ಹಿರಿಯ ಪತ್ರಕರ್ತರು   ೩೭) ಶ್ರೀ ಸಿ. ಸೀತಾರಾಂ, ಹಿರಿಯ ಪತ್ರಕರ್ತರು   ೩೮) ಶ್ರೀ ಕೆ.ಬಿ. ಪಾಟೀಲ ಕುಲಕರ್ಣಿ ಹಿರಿಯ ಪತ್ರಕರ್ತರು    

ಮುಖಪುಟ /ಸುದ್ದಿ ಸಮಾಚಾರ