ಮುಖಪುಟ /ಸುದ್ದಿ ಸಮಾಚಾರ

ಕನ್ನಡ ಮಾಧ್ಯಮದವರಿಗೆ ಉದ್ಯೋಗ- ನಲ್ಲೂರು ಆಗ್ರಹ

Kannadaratna.com satish in kannada rajyotsava kavigosthiಬೆಂಗಳೂರು, ನ. 1 - ಪ್ರೌಢಶಿಕ್ಷಣದವರೆಗೆ ಕನ್ನಡ ಮಾಧ್ಯಮದಲ್ಲಿ  ಓದಿದವರಿಗೆ ಮಾತ್ರವೇ ಸರ್ಕಾರಿ ನೌಕರಿ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದರೆ, ಕನ್ನಡವೂ ಉಳಿಯುತ್ತದೆ, ಕನ್ನಡ ಮಾಧ್ಯಮವೂ ಉಳಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಂದು ನಡೆದ ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಶಾಲೆಗಳಿಗೆ ಮಕ್ಕಳ ಕೊರತೆ ಇದೆ ಎಂದು ಮುಚ್ಚುವ ಮಾತನಾಡುವುದೇ ಸರಿಯಲ್ಲ. ಈಗ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಇದು ಉತ್ತಮ ಬೆಳವಣಿಗೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸಲು ಅನುಮತಿ ಪಡೆದು, ಆಂಗ್ಲ ಮಾಧ್ಯಮ ಶಾಲೆ ನಡೆಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ಮೃಧು ಧೋರಣೆ ಅನುಸರಿಸಬಾರದು ಎಂದು ಅವರು ಹೇಳಿದರು.

Kannadaratna.com satish in kannada rajyotsava kavigosthiಅತ್ಯಂತ ಪ್ರತಿಷ್ಠಿತವಾದ ಸಾಹಿತ್ಯ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸುವ ಉದ್ದೇಶ ತಮಗಿದೆ. ಇದನ್ನು ತಮ್ಮ ಅವಧಿಯಲ್ಲಿ ಮಾಡಲು ಸಾಧ್ಯವಾಗದಿದ್ದರೆ, ಮುಂದೆ ಬರುವ ಅಧ್ಯಕ್ಷರ ಜೊತೆ ಗೂಡಿ ಸ್ಥಾಪಿಸಲು ಯತ್ನಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಕವಿಗೋಷ್ಠಿ ಉದ್ಘಾಟಿಸಿದ ಕವಿ ಎಲ್.ಎನ್.ಮುಕುಂದರಾಜ್, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದರೆ ಮಕ್ಕಳು ಸಂಸ್ಕೃತಿ ಹೀನರಾಗುತ್ತಾರೆ. ಮುಂದೆ ತೊಂದರೆಗೆ ಒಳಗಾಗುವವರು ಆ ಮಕ್ಕಳ ಪಾಲಕರೆ ಎಂದು ಎಚ್ಚರಿಕೆ ನೀಡಿದರು.

ಪತ್ರಕರ್ತ ಟಿ.ಎಂ. ಸತೀಶ್ ಸೇರಿದಂತೆ 15ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚಿಸಿದರು

ಮುಖಪುಟ /ಸುದ್ದಿ ಸಮಾಚಾರ