ಮುಖಪುಟ /ಸುದ್ದಿ ಸಮಾಚಾರ

ಕನ್ನಡರತ್ನ ಸತೀಶ್ ಗೆ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನ
ಸ್ಪರ್ಧಾತ್ಮಕ ಯುಗದಲ್ಲಿ ಸುದ್ದಿ ಮಾರಾಟದ ವಸ್ತುವಾಗಿದೆ-ಸದಾ

T.M.Satish filicitated with Karnataka Media academy award, ತುರುವೇಕೆರೆ ಸತೀಶ್ ಗೆ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನಬೆಂಗಳೂರು,.೨೯: ಮುದ್ರಣ, ಅಂತರ್ಜಾಲ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ 23ವರ್ಷಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮಾಧ್ಯಮ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕನ್ನಡರತ್ನ.ಕಾಂ ಗೌ.ಪ್ರಧಾನ ಸಂಪಾದಕ ಟಿ.ಎಂ. ಸತೀಶ್ ಅವರಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ 2010ನೇ ಸಾಲಿನ ಕರ್ನಾಟಕ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡಪ್ರಭ ದಿನಪತ್ರಿಕೆಯಲ್ಲಿ 12ವರ್ಷ, ದಟ್ಸ್ ಕನ್ನಡ.ಕಾಂನಲ್ಲಿ 2ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಕನ್ನಡರತ್ನ.ಕಾಂ ಗೌರವ ಪ್ರಧಾನ ಸಂಪಾದಕರಾಗಿರುವ ಟಿ.ಎಂ. ಸತೀಶ್ ಬೆಂಗಳೂರು ಆಕಾಶವಾಣಿಗೆ 26ಕ್ಕೂ ಹೆಚ್ಚು ನಾಟಕ, ರೂಪಕ ರಚಿಸಿದ್ದಾರೆ.

ಕವಿಯಾಗಿ, ನಾಟಕಕಾರರಾಗಿ, ನಟರಾಗಿ ವಿವಿಧ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್, ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಪ್ರಸಕ್ತ ವಿಧ್ಯಮಾನಗಳ ಕುರಿತ  ಪ್ರಚಲಿತ, ಹಲೋ ಗೆಳೆಯರೆ, ಜೀವನದರ್ಶನ ಇತ್ಯಾದಿ ನೂರಾರು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಸಂದರ್ಶನಗಳನ್ನು ನಡೆಸಿದ್ದಾರೆ.

ಮಾರಾಟದ ವಸ್ತು;  ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕನ್ನಡರತ್ನ.ಕಾಂ ಗೌರವ ಸಂಪಾದಕ ಟಿ.ಎಂ.ಸತೀಶ್ ಸೇರಿದಂತೆ ೩೮  ಸಾಧಕರಿಗೆ ೨೦೧೦ ಹಾಗೂ ೨೦೧೧ ನೇ ಸಾಲಿನ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಸ್ಪರ್ಧಾತ್ಮಕ ಯುಗದಲ್ಲಿ ಸುದ್ದಿ ಮಾರಾಟದ ಸರಕಿನಂತಾಗಿದ್ದು, ಮಾಧ್ಯಮಗಳು ತನ್ನ ಗಡಿ ನಿಯಂತ್ರಣ ರೇಖೆಯನ್ನು ದಾಟಬಾರದೆಂದು ಹೇಳಿದರು. ಇತರ ಕೆಲವು ವಲಯಗಳು ತನ್ನ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದಭದಲ್ಲಿ ಕನಿಷ್ಠ ಪಕ್ಷ ಮಾಧ್ಯಮಗಳಾದರೂ ತನ್ನ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದರು.

ಮಾಧ್ಯಮಗಳಿಗೆ ಸರ್ಕಾರ ಅತಿ ಹೆಚ್ಚಿನ ಗೌರವ ನೀಡುತ್ತಿದೆ. ಇದೇ ರೀತಿ ಗೌರವವನ್ನು ಉಳಿಸಿಕೊಳ್ಳುವುದು ಮಾಧ್ಯಗಳ ಕರ್ತವ್ಯವಾಗಿದೆ. ವ್ಯಕ್ತಿಗಳ ಖಾಸಗಿ ಬದುಕುಗಳನ್ನು ವೈಭವೀಕರಿಸುವುದು ಸಲ್ಲದು. ಸಂಶಯಾಗ್ರಸ್ಧ ವಾತಾವರಣ ನಿರ್ಮಾಣ ಮಾಡುವುದು ಸಲ್ಲದು. ಆರೋಗ್ಯ ಪೂರ್ಣ ಮಾಹಿತಿಯನ್ನು ಪಸರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕೆಂದು ಹೇಳಿದರು.

ಅದರಲ್ಲೂ ಪ್ರಮುಖವಾಗಿ ವಿದ್ಯುನ್ಮಾನ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುವ ಆತುರದಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿವೆ. ಬ್ರೇಕಿಂಗ್ ಸುದ್ದಿಯ ಮೂಲಕ ಮನುಷ್ಯತ್ವವನ್ನೇ ಬ್ರೇಕ್ ಮಾಡುತ್ತಿವೆ. ಆರೋಗ್ಯ ಪೂರ್ಣ ಚರ್ಚೆ, ಟೀಕೆಗಳಿಗೆ ಸದಾ ಸ್ವಾಗತವಿದೆ. ತಮ್ಮ ವಿರುದ್ಧ ಬರುವ ಯಾವುದೇ ಟೀಕೆಯನ್ನು ಸಲಹೆ ಎಂದು ಸ್ವೀಕರಿಸುತ್ತೇನೆ. ಮಾಧ್ಯಮಗಳ ಕುರಿತು ತಾವು ಹೇಳುವುದನ್ನು ಕೂಡ ನೀವು ಸಲಹೆ ಎಂದು ಸ್ವೀಕರಿಸಬೇಕೆಂದು ಹೇಳಿದರು.

ಮಾಧ್ಯಮಗಳ ಕುರಿತು ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ವ್ಯಕ್ತಮಾಡಿರುವ ಅಭಿಪ್ರಾಯಗಳ ಕುರಿತು ಪ್ರಸ್ತಾಪಿಸಿದ ಅವರು, ಮಾಧ್ಯಮಗಳಿಗೆ ನೀತಿ ಸಂಹಿತೆ ಬೇಕೋ, ಬೇಡವೋ. ಇಲ್ಲವೆ ಸ್ವಯಂ ನಿಯಂತ್ರಣ ಅಗತ್ಯವಿದೆಯೋ ಎನ್ನುವ ಕುರಿತು ಚರ್ಚೆಯಾಗಬೇಕು ಎಂದು ಸದಾನಂದ ಗೌಡ ಹೇಳಿದರು.

ಬೆಂಗಳೂರು ವಿ.ವಿ. ಕುಲಪತಿ ಡಾ: ಪ್ರಭುದೇವ್ ಮಾತನಾಡಿ, ಬೆಂಗಳೂರು ವಿ.ವಿ. ದೇಶದ ವಿ.ವಿ.ಗಳಲ್ಲಿ ೯ ನೇ ಸ್ಧಾನ ಪಡೆದಿದೆ. ಕಳೆದ ವರ್ಷ ೫೦ ಪ್ರಮುಖ ವಿಶ್ವವಿಶ್ವವಿದ್ಯಾಲಯಗಳಲ್ಲಿ ಪೈಕಿ ಒಂದಾಗಿತ್ತು. ಇದೊಂದು ಉತ್ತಮ ಸಾಧನೆ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಎನ್.ಜಿ. ರಂಗನಾಥರಾವ್, ದರ ಪೈಪೋಟಿ ಮಾಧ್ಯಮಕ್ಕೆ ಸವಾಲಾಗಿ ಪರಿಣಮಿಸಿದೆ. ಜೊತೆಗೆ ಕನ್ನಡ ಪತ್ರಿಕೆಗಳಲ್ಲಿ ಇಂಗ್ಲಿಷ್ ಪದಗಳ ವೈಭವೀಕರಣವಾಗುತ್ತಿದೆ. ಅವುಗಳ ಶಿರ್ಷಿಕೆಯನ್ನು ನೋಡಿದರೆ ಇದು ಕನ್ನಡ ಪತ್ರಿಕೆಗಳೋ, ಇಲ್ಲವೆ ದ್ವಿಭಾಷಾ ಪತ್ರಿಕೆಯೋ ಎನ್ನುವ ಸಂದೇಹ ಮೂಡುತ್ತದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಅರಕೆರೆ ಜಯರಾಂ, ಮಾಧ್ಯಮಗಳ ಕುರಿತು ನ್ಯಾ. ಕಟ್ಜು ಹೇಳಿಕೆಯನ್ನು ಓರ್ವ ಪತ್ರಕರ್ತನಾಗಿ ಭಾಗಶಃ ಒಪ್ಪುತ್ತೇನೆ. ಪತ್ರಕರ್ತರ ವೇತನ ತಾರತಮ್ಯದ ಸಮಸ್ಯೆ ನಿವಾರಣೆಯಾಗಬೇಕು ಎಂದರು. Academy awards 2010-11 T.M.Satish, Editor bages Karnataka academy award

ವಾಗ್ಮಿ, ನಾಟಕಕಾರ, ಕವಿ ಟಿ.ಎಂ.ಸತೀಶ್
ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರಕಟ 

ಮುಖಪುಟ /ಸುದ್ದಿ ಸಮಾಚಾರ