|
ಮುಖಪುಟ
/ಸುದ್ದಿ
ಸಮಾಚಾರ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ ಮಡಿಕೇರಿ, ಅ. ೩೦ : ಗುರುದೇವ ನೃತ್ಯಕಲಾ ಅಕಾಡೆಮಿ ವತಿಯಿಂದ ನವೆಂಬರ್ ೧೩ ರಂದು ಗುರುನಾನಕ್ ಜಯಂತಿ ಹಾಗೂ ನ. ೧೪ ರಂದು ಮಕ್ಕಳ ದಿನಾಚರಣೆ ದಿನಗಳಂದು “ಗುರುಪಾದಾರ್ಪಣಂ”, ಸಂಗೀತ ನೃತ್ಯೋತ್ಸವ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಾಟ್ಯಾರ್ಪಣಂ ರಾಜ್ಯಮಟ್ಟದ ಭರತನಾಟ್ಯ ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದೆ. ಪ್ರತಿ ವಿಭಾಗಗಳಲ್ಲಿ ೩ ಬಹುಮಾನಗಳಿದ್ದು, ಭಾಗವಹಿಸಿದ ಸ್ಪರ್ಧಿಗಳಿಗೆ ಅರ್ಹತಾಪತ್ರ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳಿಗೆ “ನಾಟ್ಯಮಂದಾರ”, “ನಾಟ್ಯವರ್ಷಿಣಿ” ಹಾಗೂ “ನಾಟ್ಯಸಮ್ಮೋಹಿನಿ” ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಅರ್ಜಿಗಳನ್ನು ಕಳುಹಿಸಲು ಕೊನೆಯ ದಿನಾಂಕ: ೦೭-೧೧-೦೮. ಆಸಕ್ತರು ಗುರುದೇವ ಅಕಾಡೆಮಿಯ ನಿರ್ದೇಶಕರಾದ ಪಿ.ಎಂ.ರಾಧಾಕೃಷ್ಣ, ಮೊ.ಸಂಖ್ಯೆ: ೯೪೪೮೩೮೩೭೮೫, ೯೪೪೯೭೮೪೭೧೭ ಅಥವಾ ೦೮೨೩೨-೨೩೦೭೮೫ ರಲ್ಲಿ ಸಂಪರ್ಕಿಸಬಹುದು ಮತ್ತು ಇ-ಮೇಲ್ gurudevacademy@gmail.com ಸಂಪರ್ಕಿಸಹುದು ಎಂದು ಗುರುದೇವ ಲಲಿತಕಲಾ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. | |||