|
ಮುಖಪುಟ
/ಸುದ್ದಿ
ಸಮಾಚಾರ
ಜ.7ರಂದು
ಗುಲ್ಬರ್ಗಾದ ಬೌದ್ಧ ವಿಹಾರ ಸಮುಚ್ಫಯ ಲೋಕಾರ್ಪಣೆ ಬೆಂಗಳೂರು, ಅ ೩೦: ಗುಲಬರ್ಗಾದಲ್ಲಿ ನಿರ್ಮಿಸಿರುವ ಬುದ್ಧ ವಿಹಾರ ಸಮುಚ್ಫಯವನ್ನು ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಮುಂದಿನ ವರ್ಷದ ಜನವರಿ ೭ ರಂದು ಉದ್ಫಾಟಿಸಲಿದ್ದಾರೆ. ಜನವರಿ ೧೯ ರಂದು ಸಮುಚ್ಫಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಬುದ್ಧ ವಿಗ್ರಹವನ್ನು ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಬೌದ್ಧ ಧರ್ಮಗುರುಗಳಾದ ಶ್ರೀ ದಲೈ ಲಾಮ ಅವರು ಅನಾವರಣಗೊಳಿಸಲಿದ್ದಾರೆ. ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. | |||