|
ಮುಖಪುಟ
/ಸುದ್ದಿ
ಸಮಾಚಾರ
89
ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ೨೦ ಗ್ರಾಂ ಚಿನ್ನದ ಪದಕದ ಜೊತೆಗೆ ಒಂದುಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ, ಶಾಲು ಹಾಗೂ ಹಾರಗಳನ್ನು ನೀಡಿ ಗೌರವಿಸಲಾಗುತ್ತಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಾಹಿತ್ಯ, ಕೃಷಿ, ಸ್ವಾತಂತ್ರ್ಯಹೋರಾಟ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಗಮಕ, ರಂಗಭೂಮಿ, ನೃತ್ಯ, ಜಾನಪದ, ಯಕ್ಷಗಾನ, ಚಿತ್ರಕಲೆ, ಶಿಲ್ಷಕಲೆ ಹೀಗೆ ೨೪ ಕ್ಷೇತ್ರಗಳಲ್ಲಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರ ವಿವರ: ವಿಜ್ಞಾನ: ಡಾ: ಎಸ್.ಕೆ. ಶಿವಕುಮಾರ್ (ಇಸ್ರೋ), ಬೆಂಗಳೂರು, ಶ್ರೀ ಎಂ. ಅಣ್ಣಾದೊರೈ (ಇಸ್ರೋ) ಬೆಂಗಳೂರು, ಪ್ರೊ. ಪಿ. ಬಲರಾಂ (ಐ.ಐಎಸ್ಸಿ) ವಿಜ್ಞಾನ, ಬೆಂಗಳೂರು ಸಾಹಿತ್ಯ: ಡಾ: ವಿಜಯಾ ದಬ್ಬೆ, ಹಾಸನ, ಪ್ರೊ, ಎಸ್.ಜಿ. ಸಿದ್ದರಾಮಯ್ಯ, ತುಮಕೂರು, ಡಾ: ವೀರಣ್ಣ ರಾಜೂರ, ಧಾರವಾಡ, ಶ್ರೀ ಎಸ್.ಆರ್. ರಾಮಸ್ವಾಮಿ, ಬೆಂಗಳೂರು, ಶ್ರೀಮತಿ ಫರೀದಾ ರಹಮತುಲ್ಲಾ (ಉರ್ದು), ಡಾ: ಸಣ್ಣರಾಮನಾಯ್ಕ, ಶಿವಮೊಗ್ಗ , ಶ್ರೀ ಅಂಬಾತನಯ ಮುದ್ರಾಡಿ, ಉಡುಪಿ, ಕೃಷಿ: ಶ್ರೀಮತಿ ಮೀರಾತಾಯಿ ಕೊಪ್ಪಿಕರ್(ಸಾವಯವ ಕೃಷಿ) ಧಾರವಾಡ, ಶ್ರೀಮತಿ ಪಾಪಮ್ಮ ಪಾಪಣ್ಣ, ಕುರುಬರಹಳ್ಳಿ(ಸಾವಯವ ಕೃಷಿ) ಕೋಲಾರ, ಡಾ: ಜಿ.ಪಿ. ಶೆಟ್ಟಿ (ಕೃಷಿ ವಿಜ್ಞಾನಿ) ಉಡುಪಿ ಸ್ವಾತಂತ್ರ್ಯ ಹೋರಾಟಗಾರರು: ಶ್ರೀ ಹಮ್ಮಣ್ಣ ಮಾಣಿ ನಾಯಕ, ಉತ್ತರ ಕನ್ನಡ ಮಾಹಿತಿ ತಂತ್ರಜ್ಞಾನ: ಶ್ರೀ ಮೋಹನದಾಸ್ ಪೈ, ದಕ್ಷಿಣ ಕನ್ನಡ ಶ್ರೀ ಅನಂತ ಕೊಪ್ಪರ, ಗದಗ
ಶಾಸ್ತ್ರೀಯ ಸಂಗೀತ:
ಶ್ರೀ ವೆಂಕಟರಾಘವನ್ (ಕರ್ನಾಟಕ ಶಾಸ್ತ್ರೀಯ ಸಂಗೀತ) ಮೈಸೂರು ಸುಗಮ ಸಂಗೀತ: ಶ್ರೀ ಟಿ.ವಿ. ರಾಜು, ತುಮಕೂರು, ಶ್ರೀ ಯಶವಂತ ಹಳಬಂಡಿ, ಧಾರವಾಡ, ಶ್ರೀಮತಿ ಶಾಂತಾ ಆನಂದ, ಶಿವಮೊಗ್ಗ ಗಮಕ: ಶ್ರೀ ಕೆ.ಎಲ್. ನಾರಾಯಣಸ್ವಾಮಿ(ಗಮಕಿ) ಹಾಸನ ರಂಗಭೂಮಿ: ಶ್ರೀ ವಿ. ರಾಮಮೂರ್ತಿ, ಬೆಂಗಳೂರು ಶ್ರೀಮತಿ ವಾಣಿ ಸರಸ್ವರಿ ನಾಯ್ಡು, ಹುಬ್ಬಳ್ಳಿ ಶ್ರೀ ಬಿ.ಎಂ. ಕೃಷ್ಣೇಗೌಡ, ಚಿಕ್ಕಬಳ್ಳಾಪುರ, ಶ್ರೀಮತಿ ಮಾಲತಿ ಸುಧೀರ್, ಬೆಂಗಳೂರು, ಶ್ರೀ ಭೈರೇಗೌಡ ಮರಿಸಿದ್ದಯ್ಯ, ರಾಮನಗರ ನೃತ್ಯ: ಶ್ರೀಮತಿ ಗೀತಾ ಬಾಲಿ, ಬೆಂಗಳೂರು ಜಾನಪದ: ಡಾ: ಅಂಬಳಿಕೆ ಹಿರಿಯಣ್ಣ, ಶಿವಮೊಗ್ಗ, ಶ್ರೀ ಈರಬಡಪ್ಪ, ಚಿತ್ರದುರ್ಗ, ಶ್ರೀ ಶಿವಲಿಂಗಪ್ಪ ಹಗಲು ವೇಷಗಾರ, ರಾಯಚೂರು, ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ, ದಾವಣಗೆರೆ, ಶ್ರೀಮತಿ ಭೋವಿ ಜಯಮ್ಮ, ಚಿತ್ರದುರ್ಗ, ಶ್ರೀ ಲಿಂಗದೇವರು ಮಹದೇವಪ್ಪ, ಮಂಡ್ಯ. ಯಕ್ಷಗಾನ: ಶ್ರೀ ಕೆ. ಗೋವಿಂದಭಟ್, ದಕ್ಷಿಣ ಕನ್ನಡ, ಶ್ರೀಮತಿ ಸಣ್ಣಕ್ಕಿ ಬಂಗ್ಗೆಗುಡ್ಡೆ (ಪಾಡ್ಡನಗಾಯಕಿ) ದಕ್ಷಿಣ ಕನ್ನಡ ಶ್ರೀ ಪಾತಾಳ ವೆಂಕಟರಮಣಭಟ್, ದಕ್ಷಿಣ ಕನ್ನಡ, ಶ್ರೀ ಅರಳಕುಪ್ಪೆ ನಂಜಪ್ಪ (ತುಮಕೂರು) ಚಿತ್ರಕಲೆ: ಪ್ರೊ.ವಿ.ಎಂ. ಸೊಲಾಪುರ್ಕರ್, ಬಿಜಾಪುರ, ಶ್ರೀ ಚಂದ್ರನಾಥ ಆಚಾರ್,ಬೆಂಗಳೂರು ಶ್ರೀ ಯಶವಂತ ಹಿಬಾರೆ, ಬೀದರ, ಶ್ರೀ ಬಿ.ಜಿ. ಮಹಮದ್, ದಕ್ಷಿಣ ಕನ್ನಡ, ಶಿಲ್ಪಕಲೆ: ಶ್ರೀ ಜಯಣ್ಣಾಚಾರ್, ಚಿಕ್ಕಮಗಳೂರು, ಶ್ರೀ ಕೆ. ನಾರಾಯಣರಾವ್, ಶಿವಮೊಗ್ಗ, ಗುಣವಂತೇಶ್ವರ ಬಟ್, ಉಡುಪಿ ಚಲನಚಿತ್ರ: ಶ್ರೀ ಎಸ್.ಕೆ. ಭಗವಾನ್(ದೊರೆ ಭಗವಾನ್)ಬೆಂಗಳೂರು, ಶ್ರೀ ಎಸ್.ಪಿ. ಬಾಲಸುಬ್ರಮಣ್ಯಂ(ಗಾಯಕರು)ಚೆನ್ನೈ ಶ್ರೀ ಸಾಯಿಕುಮಾರ್(ನಟ ನಿರ್ದೇಶಕ)ಬೆಂಗಳೂರು ಶ್ರೀ ಬಸಂತಕುಮಾರ್ ಪಾಟೀಲ್, (ನಿರ್ದೇಶಕ, ನಿರ್ಮಾಪಕ, ನಾಯಕ) ಬಿಜಾಪುರ, ಶ್ರೀಮತಿ ಪ್ರಮೀಳಾ ಜೋಷಾಯ್ (ನಟಿ) ಬೆಂಗಳೂರು ಶ್ರೀ ಶ್ರೀನಿವಾಸ ಕಡವಿಗೆರೆ(ಕಿರುತೆರೆ)ತುಮಕೂರು ವೈದ್ಯಕೀಯ: ಡಾ: ಹೆಚ್.ವಿ. ಕೊಟ್ರೇಶ್, ಶಿವಮೊಗ್ಗ, ಡಾ: ಡಿ.ನಾಗರಾಜ್(ನಿಮಾನ್ಸ್ ನಿರ್ದೇಶಕರು)ಬೆಂಗಳೂರು, ಡಾ: ಸುಬ್ರಾಯಪ್ಪ, ಬೆಂಗಳೂರು, ಡಾ: ವೆಂಕಟರಮಣ ನೀಲಂ, ಬೆಂಗಳೂರು, ಡಾ: ಬಿ.ಕೆ. ಶ್ರೀನಿವಾಸಮೂರ್ತಿ, ಬಳ್ಳಾರಿ. ಪತ್ರಿಕೋದ್ಯಮ: ಶ್ರೀ ಪದ್ಮರಾಜ್ ದಂಡಾವತಿ, ಬಿಜಾಪುರ, ಶ್ರೀ ಕಷ್ಣಮೂರ್ತಿ ಹೆಗಡೆ, ಧಾರವಾಡ, ಶ್ರೀ ರವಿಬೆಳಗೆರೆ, ಬಳ್ಳಾರಿ, ಶ್ರೀ ಕೆ.ಬಿ. ಗಣಪತಿ, ಕೊಡಗು, ಶ್ರೀ ಬೇಸುನಾ ಮಲ್ಯ, ಬೆಂಗಳೂರು, ಶ್ರೀ ಚಂದ್ರಕಾಂತ್ , ಶಿವಮೊಗ್ಗ, ಶ್ರೀ ಮದನ್ ಮೋಹನ್, ಧಾರವಾಡ, ಶ್ರೀ ಇಮ್ರಾನ್ ಖುರೇಷಿ, ಬೆಂಗಳೂರು. ಶಿಕ್ಷಣ: ಪ್ರೊ. ಕೆ.ಎಸ್. ನಾರಾಯಣಾಚಾರ್ಯ, ಧಾರವಾಡ, ಪ್ರೊ.ವಿ.ಬಿ. ಕುಟಿನೋ, ಉತ್ತರ ಕನ್ನಡ, ಶ್ರೀ ಬಸವರಾಜಪಾಟೀಲ್, ಸೇಡಂ, ಗುಲಬರ್ಗಾ, ಡಾ: ಕುರಂಜಿ ವೆಂಕಟರಮಣಗೌಡ, ದಕ್ಷಿಣ ಕನ್ನಡ ಕರಕುಶಲ ಕಲೆ: ಶ್ರೀ ಪುಟ್ಟರಾಜು, ಚಾಮರಾಜನಗರ, ಶ್ರೀ ನಾರಾಯಣಪ್ಪ (ನೇಕಾರ) ಬೆಂಗಳೂರು ಕ್ರೀಡೆ: ಶ್ರೀಮತಿ ಜೆ.ಜೆ. ಶೋಭಾ (ಹೆಪ್ಟತ್ಲಾನ್) ಧಾರವಾಡ, (ಅರ್ಜುನ ಪ್ರಶಸ್ತಿ ವಿಜೇತರು) ಕುಮಾರಿ ಶಿಖಾ ಟಂಡನ್ (ಈಜು) (ಅರ್ಜುನ ಪ್ರಶಸ್ತಿ ವಿಜೇತರು) ಬೆಂಗಳೂರು ಸಮಾಜಸೇವೆ/ಸಂಕೀರ್ಣ: ಶ್ರೀ ಎನ್.ಆರ್. ನಾರಾಯಣರಾವ್( ಹೋಟೆಲ್ ಉದ್ಯಮ) ಉಡುಪಿ, ಶ್ರೀ ಎಸ್.ಎಸ್. ಪಾಟೀಲ್, (ಸಮಾಜ ಸೇವೆ/ಉದ್ಯಮ) ಗುಲಬರ್ಗಾ, ಶ್ರೀ ಪಿ. ವಲಿ, ಬಳ್ಳಾರಿ, ಶ್ರೀ ಎಸ್.ಸಿ. ಬರ್ಮನ್(ಆಡಳಿತ) ಬೆಂಗಳೂರು, ಶ್ರೀ ಕೇವಲಚಂದ್, ಬೆಂಗಳೂರು, ಶ್ರೀ ಸಿದ್ದನಗೌಡ ಪಾಟೀಲ(ಕನ್ನಡ ಹೋರಾಟಗಾರರು) ಬೆಳಗಾವಿ, ಶ್ರೀ ನಿತಿನ್ ಷಾ (ಪುಸ್ತಕ ಪ್ರಕಾಶನ) ಬೆಂಗಳೂರು
ಹೊರನಾಡು/ಹೊರದೇಶ
ಕನ್ನಡಿಗ: ಡಾ: ಉದಯ
ಬಿ.ಎಸ್. ಪ್ರಕಾಶ್,
ವೈದ್ಯಕೀಯ ವಿಜ್ಞಾನ, ಅಮೇರಿಕಾ,
ಡಾ: ಮೀರಜ್ ಪಾಟೀಲ್(ವೈದ್ಯ),(ಇಂಗ್ಲೆಂಡ್) ಡಾ: ಎಂ.ಬಿ.
ಉದೋಶಿ (ಸಮಾಜ ಸೇವೆ/ವೈದ್ಯಕೀಯ)ಅಮೇರಿಕಾ, ಶ್ರೀ
ವಿಜಯ್ಕುಮಾರ್ ಶೆಟ್ಟಿ, ಸಮಾಜ ಸೇವೆ,ಮುಂಬೈ,
ಶ್ರೀ ಉಪೇಂದ್ರ ಭಟ್, ಹಿಂದೂಸ್ಥಾನಿ
ಸಂಗೀತ, ಪುಣೆ, ಡಾ: ಉಮಾ
ಮೈಸೂರ್ಕರ್ (ವೈದ್ಯ) ಅಮೇರಿಕಾ | |||