|
ರಾಜ್ಯದಲ್ಲಿ
ಬಂಡವಾಳ ಹೂಡಿ:ಎನ್.ಆರ್.ಐ.ಗಳಿಗೆ
ಸಿಎಂ ಕರೆ
ಅಕ್ಕ ಸಮ್ಮೇಳನ
:
ಯಡಿಯೂರಪ್ಪ ಭಾಷಣ
ಬೆಂಗಳೂರು,
ಸೆ.5:
ಅಮೆರಿಕದ ಅಕ್ಕ
ಸಂಸ್ಥೆಯ ಸಹಭಾಗಿತ್ವದಲ್ಲಿ,
ಇಂಡ್ಯಾ
ಕಾಮಿಕ್ಸ್ ವತಿಯಿಂದ ಆಯೋಜಿಸಿರುವ ಸಾಂಸ್ಕೃತಿಕ ಸಂವಾದ ಮತ್ತು ಸಂಗೀತ ಸಂಜೆ
ಕಾರ್ಯಕ್ರಮಕ್ಕಾಗಿ ಆಗಮಿಸಿರುವ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರೇ,
ಸಾಹಿತಿ
ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರೇ,
ಶಿವಮೊಗ್ಗ
ಸುಬ್ಬಣ್ಣ ಅವರೇ,
ಪ್ರೊ.
ಎಸ್.ಜಿ. ಸಿದ್ಧರಾಮಯ್ಯ ಅವರೇ,
ಶ್ರೀಮತಿ
ಚಂದ್ರಿಕಾ ಗುರುರಾಜ್ ಅವರೇ ಹಾಗೂ ನ್ಯೂಜೆರ್ಸಿಯಲ್ಲಿ ನಡೆಯುತ್ತಿರುವ ಅಕ್ಕ
ಸಮ್ಮೇಳನದಲ್ಲಿ ಉಪಸ್ಥಿತರಿರುವ ಗಣ್ಯರೇ,
ಅಕ್ಕ
ಸಮ್ಮೇಳನಕ್ಕೆ ನಿನ್ನೆಯೇ ಅಮೆರಿಕದ ನ್ಯೂಜೆರ್ಸಿಯಲ್ಲಿ ಆರಂಭಗೊಂಡಿದೆ. ಸಮಾರಂಭಕ್ಕೆ
ಅದ್ದೂರಿ ಆರಂಭ ದೊರಕಿದೆ. ಮೆರವಣಿಗೆಯನ್ನು ನೋಡಿ ಜನರು ಪುಳಕಿತರಾಗಿದ್ದಾರೆ. ನನಗೂ
ಸೇರಿದಂತೆ ನಾಡಿನ ಎಲ್ಲಿರಿಗೂ ಸಂತಸ ತಂದಿದೆ.
ಇಂದು ವಿಡಿಯೋ
ಕಾನ್ಫರೆನ್ಸ್ ಮೂಲಕ ಈ ಸಾಂಸ್ಕೃತಿಕ ಸಂವಾದ ಮತ್ತು ಸಂಗೀತ ಸಂಜೆ ಕಾರ್ಯಕ್ರಮಕ್ಕೆ
ಸಂತೋಷದಿಂದ ಚಾಲನೆ ನೀಡಿದ್ದೇನೆ. ಇಲ್ಲಿಂದಲೇ ನಿಮ್ಮೊಂದಿಗೆ ಸಂವಾದ ನಡೆಸುತ್ತಿರುವುದು
ಅತೀವ ಸಂತಸ ತಂದಿದೆ.
ವಿಶ್ವಮಾನವ
ಸಂದೇಶವನ್ನು ಸಾರಿದ ಮಹಾಕವಿ ಕುವೆಂಪು ಅವರೇ " ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು " ಎಂಬ ಸಂದೇಶವನ್ನು ನೀಡಿರುವುದು ಬಹಳ ಅರ್ಥಪರ್ಣ.
ಏಕೆಂದರೆ
ಕನ್ನಡನಾಡಿನಲ್ಲಿ ಹುಟ್ಟಿದ ಮೇಲೆ,
ನಾವು
ನಂತರ ಎಲ್ಲೇ ಜೀವಿಸಲಿ,
ನಮ್ಮ
"ತನು ಕನ್ನಡ ಮನ ಕನ್ನಡ ನುಡಿ ಕನ್ನಡ " ಆಗಿರುವುದೂ " ಮನೆಮನೆಗಳಲ್ಲಿ ಮನಮನಗಳಲ್ಲಿ "
ಕನ್ನಡದ ದೀಪ ಉರಿಯುವುದೂ ಅತ್ಯಂತ ಅಪೇಕ್ಷಣೀಯ.
ಅದರಂತೆ,
ಹುಟ್ಟಿದ
ಕನ್ನಡನಾಡನ್ನು ಬಿಟ್ಟು,
ಹತ್ತಾರು
ಸಾವಿರ ಮೈಲುಗಳ ದೂರ ಬಂದಿದ್ದರೂ ತಮ್ಮೆಲ್ಲರ ಹೃದಯದಲ್ಲಿ ಆ ಕನ್ನಡ ಪ್ರೇಮ
ಪ್ರಜ್ವಲಿಸುತ್ತಿದೆ. ಆದ್ದರಿಂದಲೇ,
"ಅಮೆರಿಕ
ಕನ್ನಡ ಕೂಟಗಳ ಆಗರ"
ನ್ಯೂಜೆರ್ಸಿಯಲ್ಲಿ
ಹಮ್ಮಿಕೊಂಡಿರುವ ಆರನೇ "ಅಕ್ಕ" ಕನ್ನಡ ಸಮ್ಮೇಳನಕ್ಕೆ ತಾವೆಲ್ಲರೂ ಸಂಭ್ರಮ,
ಸಡಗರಗಳಿಂದ ಆಗಮಿಸಿದ್ದೀರಿ. ತಮ್ಮನ್ನು ನೋಡಲು,
ತಮ್ಮೊಂದಿಗೆ ನಲಿಯಲು,
ಕನ್ನಡದ
ಕವಿಗಳು ಮತ್ತು ಕಲಾವಿದರು ಅಲ್ಲಿಗೆ ಬಂದಿದ್ದಾರೆ. ಸಮ್ಮೇಳನದಲ್ಲಿರುವ ಸಮಸ್ತರಿಗೂ ಆರು
ಕೋಟಿ ಕನ್ನಡಿಗರ ಪರವಾಗಿ ಕರ್ನಾಟಕದ ಮುಖ್ಯಮಂತ್ರಿಯಾದ ನಾನು ಹಾರ್ದಿಕ ಅಭಿನಂದನೆಗಳನ್ನು
ಸಲ್ಲಿಸುತ್ತೇನೆ.
"ಸಪ್ತ
ಸಾಗರದಾಚೆಯೆಲ್ಲೋ ಸುಪ್ತ ಸಾಗರ ಅಡಗಿದೆ" ಎಂಬ ಕವಿವಾಣಿಯಂತೆ,
ಸಾಗರದಾಚೆ
ನಡೆಯುತ್ತಿರುವ ಈ ಸುಪ್ತ ಕನ್ನಡ ಪ್ರೀತಿಯ ಮಹಾಸಂಭ್ರಮದಲ್ಲಿ ನಾನೇ ಪಾಲ್ಗೊಳ್ಳಬೇಕೆಂದು
ಬಯಸಿದ್ದೆ.
ಆದರೆ,
ಕರ್ನಾಟಕದ
ಉತ್ತರ ಭಾಗದಲ್ಲಿ ಅಪಾರ ಮಳೆಯಾಗುತ್ತಿದೆ,
ಹಲವಾರು
ತುರ್ತು ಕೆಲಸಗಳಿವೆ,
ಅವುಗಳನ್ನೆಲ್ಲ ಬದಿಗೊತ್ತಿ ಅಮೆರಿಕಕ್ಕೆ ಧಾವಿಸಿ ಬರಲು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ನನಗೆ
ಎರಡು ಬಾರಿ "ಅಕ್ಕ" ಸಮ್ಮೇಳನ ಉದ್ಘಾಟಿಸುವ ಅವಕಾಶ ಸಿಕ್ಕಿತ್ತು. ಈ ಬಾರಿ ಆ ಭಾಗ್ಯ
ತಪ್ಪಿದೆ ಎಂಬ ಖೇದವಿದೆ. ನನ್ನ ಗೈರುಹಾಜರಿಯನ್ನು ಮನ್ನಿಸುವ ಹೃದಯವೈಶಾಲ್ಯ
ತಮ್ಮೆಲ್ಲರಿಗಿದೆ ಎಂಬುದು ನನಗೆ ತಿಳಿದಿದೆ.
ಅಮೆರಿಕದಲ್ಲಿ
ವಾಸವಾಗಿರುವ ಕನ್ನಡಿಗರು ಮತ್ತು ಕರ್ನಾಟಕದಲ್ಲಿರುವ ಕನ್ನಡಿಗರ ಹೃದಯಗಳ ನಡುವೆ
ಅಮೃತವಾಹಿನಿಯೊಂದು ಸದ್ದಿಲ್ಲದೆ ಹರಿಯುತ್ತಿದೆ. "ಅಕ್ಕ" ಸಮ್ಮೇಳನ ಪ್ರತಿವರ್ಷ
ಅದಕ್ಕೊಂದು ಪ್ರೀತಿಯ ಸೇತುವೆ ಕಟ್ಟುತ್ತಿದೆ.
ಕನ್ನಡ ನಾಡುನುಡಿಯ
ಬಗ್ಗೆ ಅನನ್ಯ ಅಭಿಮಾನ ಇಟ್ಟುಕೊಂಡಿರುವ ತಾವೆಲ್ಲ ಅಪಾರ ಸಂಖ್ಯೆಯಲ್ಲಿ ಈ ಸಮ್ಮೇಳನಕ್ಕೆ
ಬಂದಿದ್ದೀರಿ. ನಮ್ಮ ಸರ್ಕಾರ ಆದರದಿಂದ ಕಳುಹಿಸಿರುವ ಮತ್ತು "ಅಕ್ಕ" ಸಂಸ್ಥೆಯೇ
ಕರೆಸಿಕೊಂಡಿರುವ ಗಣ್ಯ ಸಾಂಸ್ಕೃತಿಕ ರಾಯಭಾರಿಗಳು,
ತಾವೆಲ್ಲ
ಈಗ ಇರುವ ನ್ಯೂಜೆರ್ಸಿಯಲ್ಲಿಯೇ ಕನ್ನಡನಾಡಿನ ಸಂಸ್ಕೃತಿಯ ವೈಭವವನ್ನು ತಮ್ಮ ಕಣ್ಣಿಗೆ
ಮನಕ್ಕೆ ಸಂತಸವಾಗುವಂತೆ ಕಟ್ಟಿಕೊಡಲಿದ್ದಾರೆ.
"ಸರ್ವಂ
ಕನ್ನಡಮಯಂ" ಅನ್ನುವಂತಹ ಸಂಭ್ರಮದಲ್ಲಿ ತಾವೆಲ್ಲರೂ ಮಿಂದು ಧನ್ಯರಾಗಬೇಕೆಂದು ನಾನು
ಹಾರೈಸುತ್ತೇನೆ. ಈ ಸಮ್ಮೇಳನದಿಂದ ತಾವು ಒಯ್ಯುವ ಸವಿನೆನಪುಗಳ ಬುತ್ತಿ ಮುಂದಿನ "ಅಕ್ಕ"
ಸಮ್ಮೇಳನದವರೆಗೆ ಸಾಕಾಗುವ ನಂಬಿಕೆ ನನಗಿದೆ!
ಕನ್ನಡನಾಡಿನಿಂದ
ಹತ್ತಾರು ಸಾವಿರ ಮೈಲುಗಳ ದೂರವಿದ್ದರೂ ತಮ್ಮೆಲ್ಲರ ಮನ ಕನ್ನಡನಾಡಿನ ಏಳಿಗೆಯನ್ನೇ
ಕುರಿತು ಚಿಂತಿಸುತ್ತಿರುತ್ತದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ತಮ್ಮೆಲ್ಲರ
ಆಶಯಗಳನ್ನು ಸಾಕಾರಗೊಳಿಸುವಂತೆ ನಮ್ಮ ಸರ್ಕಾರ ಅಹರ್ನಿಶಿ ಶ್ರಮಿಸುತ್ತಿದೆ.
ಕರ್ನಾಟಕವನ್ನು
ವಿಶ್ವದರ್ಜೆಯ ಅವಕಾಶಗಳ ನಾಡಾಗಿಸಲು ಅಗತ್ಯವಾದ ಅಸ್ತಿವಾರವನ್ನು ನಿರ್ಮಿಸಲು ಸಕಲ
ಪ್ರಯತ್ನ ಮಾಡುತ್ತಿದೆ. ಎರಡು ವರ್ಷಗಳನ್ನು ಪೂರೈಸಿರುವ ನಮ್ಮ ಬಿಜೆಪಿ ಸರ್ಕಾರ,
ಸಮೃದ್ಧ-
ಸಬಲ ಕರ್ನಾಟಕದ ನಿರ್ಮಾಣಕ್ಕೆ ಪಂಥಾಹ್ವಾನ ಸ್ವೀಕರಿಸಿ ಕಟಿಬದ್ಧವಾಗಿದೆ.
ಕಳೆದ ಜೂನ್
ತಿಂಗಳಿನಲ್ಲಿ ಬೆಂಗಳೂರಿನಲ್ಲಿ "ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ" ವನ್ನು
ಹಮ್ಮಿಕೊಳ್ಳಲಾಗಿತ್ತು. ಅದರ ಅಭೂತಪೂರ್ವ ಯಶಸ್ಸು ನಮ್ಮ ಸರ್ಕಾರದ ಕಿರೀಟಪ್ರಾಯ
ಸಾಧನೆಗಳಲ್ಲೊಂದು ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.
ಕರ್ನಾಟಕವನ್ನು
ಜಗತ್ತಿಗೇ ಮಾದರಿಯಾದ ಉದ್ಯಮದ ನಾಡು ಮಾಡುವ ಉದ್ದೇಶದ ಈ ಸಮಾವೇಶದಲ್ಲಿ ಜಗತ್ತಿನ
ಮೂಲೆಮೂಲೆಗಳಿಂದ ಬಂದ ಉದ್ಯಮಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಆರ್ಥಿಕ
ಹಿಂಜರಿತವಿದ್ದರೂ ನಮ್ಮ ಆಹ್ವಾನಕ್ಕೆ ಓಗೊಟ್ಟು ವಿದೇಶಿ ಬಂಡವಾಳ ಹೂಡಿಕೆ ಕಂಪೆನಿಗಳ
ಮೂರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಿದ್ದರು. ಹೊರನಾಡಿನಲ್ಲಿರುವ ತಮ್ಮ ಕೆಲವು
ಮಿತ್ರರೂ ಅದರಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದ
ಫಲಶ್ರುತಿಯಾಗಿ ಕರ್ನಾಟಕದಲ್ಲಿ ಒಟ್ಟು ಐದು ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಲು
ಉದ್ಯಮಿಗಳು ಮುಂದೆ ಬಂದರು. ಇದರಿಂದ
ಒಟ್ಟು
ಎಂಟು ಲಕ್ಷ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ನಮ್ಮ ಯುವಜನರ ಕೈಗಳಿಗೆ ಕೆಲಸ,
ಅವರ
ಕುಟುಂಬಗಳಿಗೆ ನೆಮ್ಮದಿ ದೊರೆಯಲಿದೆ.
"ವಿಶ್ವ ಬಂಡವಾಳ
ಹೂಡಿಕೆ ಸಮಾವೇಶ"ದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ಹಲವು ಕಂಪೆನಿಗಳು ರಾಜ್ಯದಲ್ಲಿ
ಈಗಾಗಲೇ ಕಾರ್ಯಾರಂಭ ಮಾಡಿವೆ ಎಂಬುದು ನಮ್ಮೆಲ್ಲರ ಬದ್ಧತೆಯನ್ನು ತೋರುತ್ತದೆ.
ಕರ್ನಾಟಕವನ್ನು
ಉದ್ಯಮಿಗಳ ಸ್ವರ್ಗವನ್ನಾಗಿಸುವ ನಮ್ಮ ಸರ್ಕಾರದ ಹಂಲ ಇಲ್ಲಿಗೇ ಮುಗಿಯುವುದಿಲ್ಲ.
ಅನಿವಾಸಿ ಕನ್ನಡಿಗರು ಸೇರಿದಂತೆ ಅನಿವಾಸಿ ಭಾರತೀಯರ ಅಗತ್ಯಗಳಿಗೆ ಸ್ಪಂದಿಸಲು ಮತ್ತು
ಅವರು ಬಂಡವಾಳ ಹೂಡಲು ಮುಂದೆ ಂದರೆ ಸಮನ್ವಯ ಸಾಧಿಸಲು "ಅನಿವಾಸಿ ಭಾರತೀಯರ ಕೋಶ" (ಎನ್
ಆರ್ ಐ ಸೆಲ್ ) ಸ್ಥಾಪಿಸಲಾಗಿದೆ.
ದೇಶದಲ್ಲಿ ಇಂಥ
ಪ್ರಯತ್ನ ಮಾಡಿದ ಮೊದಲ ರಾಜ್ಯ ಕರ್ನಾಟಕ. ಈ ಸ್ವಾಯತ್ತ ಸಂಸ್ಥೆಗೆ ಮುಖ್ಯಮಂತ್ರಿಯಾದ
ನಾನೇ ಅಧ್ಯಕ್ಷರಾಗಿದ್ದು,
ವಿಧಾನ
ಪರಿಷತ್ ಸದಸ್ಯ ಶ್ರೀ ಗಣೇಶ್ ಕಾರ್ಣಿಕ್ ಉಪಾಧ್ಯಕ್ಷರಾಗಿದ್ದಾರೆ. ಅನಿವಾಸಿ ಭಾರತೀಯ
ಪ್ರತಿನಿಧಿಗಳು ಸೇರಿ,
ರಾಜ್ಯದ
ಪ್ರಮುಖ ಉದ್ಯಮಿಗಳು,
ಸಾಂಸ್ಕೃತಿಕ ಲೋಕದ ಗಣ್ಯರು,
ಆರ್ಥಿಕ-
ಸಾಮಾಜಿಕ ಚಿಂತಕರು ಮತ್ತು ಸರ್ಕಾರದ ಉನ್ನತಾಧಿಕಾರಿಗಳು ಈ ಸಂಸ್ಥೆಯ ಸದಸ್ಯರಾಗಿ ಸಲಹೆ
ನೀಡಲಿದ್ದಾರೆ.
"ಅನಿವಾಸಿ
ಭಾರತೀಯರ ಕೋಶ"ದ ಪ್ರಯೋಜನಗಳು ಹಲವಾರು. ಈ ವ್ಯವಸ್ಥೆಯಿಂದಾಗಿ ಅನಿವಾಸಿ ಭಾರತೀಯರು,
ವಿಶೇಷವಾಗಿ ಅನಿವಾಸಿ ಕನ್ನಡಿಗರು ತಮ್ಮ ಉದ್ಯಮದ ಆಕಾಂಕ್ಷೆಗಳನ್ನು ಹಂಚಿಕೊಳ್ಳಲು,
ಸಂಪರ್ಕ
ಸಾಧಿಸಲು ಸುಲಭವಾಗುತ್ತದೆ.
ಅಮೆರಿಕದಲ್ಲಿರುವ
ಸಾಹಸಿ ಕನ್ನಡಿಗರೇ,
ನಮ್ಮ
ಸರ್ಕಾರ ತಮ್ಮಲ್ಲಿ ಮನವಿ ಮಾಡುತ್ತದೆ- ತಾವು ಅಲ್ಲಿ ಗಳಿಸಿದ್ದನ್ನು ಕರ್ನಾಟಕದಲ್ಲಿ
ಬಂಡವಾಳವಾಗಿ ಹೂಡಲು ಮುಂದೆ ಬನ್ನಿ,
ತಮ್ಮ
ಕನಸುಗಳಿಗೆ ರೆಕ್ಕೆ ಕಟ್ಟಲು ನಾವಿದ್ದೇವೆ. ಕರ್ನಾಟಕದ ಮುನ್ನಡೆಯಲ್ಲಿ ತಾವೂ
ನಮ್ಮೊಂದಿಗೆ ಹೆಜ್ಜೆ ಹಾಕಿ.
ಸುಭದ್ರ ಕರ್ನಾಟಕ
ನಿರ್ಮಾಣದಲ್ಲಿ ಪಾಲ್ಗೊಂಡ ಕೀರ್ತಿ ಮತ್ತು ತೃಪ್ತಿ ತಮ್ಮದಾಗಲಿ. ಗಳಿಸಿದ ಹಣ ಮಾತ್ರವಲ್ಲ,
ಅನುಭವದ
ಹೂರಣವನ್ನೂ ಧಾರೆಯೆರೆಯಿರಿ. ತಾವಿಲ್ಲದೆ ನಾವು ಸಮೃದ್ಧ ಕರ್ನಾಟಕವನ್ನು ಕಟ್ಟುವುದು
ಹೇಗೆ?
ಕರ್ನಾಟಕದ ಯಾವುದೇ
ಜಿಲ್ಲೆಯಲ್ಲಿ ತಾವು ಆರಿಸಿಕೊಳ್ಳುವ ಕಾರ್ಯಕ್ಷೇತ್ರಗಳಿಗೆ ನಮ್ಮ ಸರ್ಕಾರ ಬೇಕಾದ
ಸೌಲಭ್ಯಗಳನ್ನು ಒದಗಿಸುತ್ತದೆ. ನಾವು ಇದಕ್ಕಾಗಿ ಕೃಷಿಕರ ಫಲವತ್ತಾದ ಭೂಮಿಯನ್ನು
ವಶಪಡಿಸಿಕೊಳ್ಳುವುದಿಲ್ಲ. ರಡು ಭೂಮಿಯನ್ನಷ್ಟೇ ಗುರುತಿಸಿ ಕೈಗಾರಿಕೆಗಳಿಗೆ
ಉಪಯೋಗಿಸಲಾಗುತ್ತದೆ. ಇದಕ್ಕಾಗಿ "ಕೈಗಾರಿಕಾ ನೀತಿ"ಯನ್ನು ಜಾರಿಗೆ ತರಲಾಗಿದೆ. ದೂರದ
ನಾಡಿನಲ್ಲಿದ್ದರೂ ತಮಗೆ ತಾಯ್ನಾಡಿನ ಬಗ್ಗೆ ಅತೀವ ಕಾಳಜಿ ಇದ್ದೇ ಇರುತ್ತದೆ.
ಅನ್ನದಾತರಾದ ನಮ್ಮ ರೈತರು ನೆಮ್ಮದಿಯಿಂದ ಬಾಳಬೇಕು ಎಂಬುದು ನಮ್ಮ ಸರ್ಕಾರದ ಶಪಥ ಎಂಬುದು
ತಮಗೆಲ್ಲ ತಿಳಿದೇ ಇದೆ.
ರಾಸಾಯನಿಕ ಗೊಬ್ಬರ,
ಕ್ರಿಮಿನಾಶಕಗಳ ಬಳಕೆಯಿಂದ ಅಪಾರ ಸಂಕಷ್ಟಕ್ಕೆ ಒಳಗಾಗಿರುವ ನಮ್ಮ ರೈತರನ್ನು ಪಾರುಮಾಡಲು
ನಮ್ಮ ಸರ್ಕಾರ,
ಸಾವಯವ
ಕೃಷಿಗೆ ಒತ್ತು ನೀಡಿದೆ. ಅದರಲ್ಲಿ ತೊಡಗಿಕೊಳ್ಳುವ ರೈತರಿಗೆ ಈಗಾಗಲೇ ನಮ್ಮ ಸರ್ಕಾರ
ನೂರು ಕೋಟಿ ರೂಪಾಯಿಗಳನ್ನು ನೀಡಿದೆ.
ನಮ್ಮ ಸರ್ಕಾರ
ರೈತರಿಗೆ ಕೇವಲ ಶೇ. ೩ ರ ಬಡ್ಡಿ ದರದಲ್ಲಿ ಸಾಲ ನೀಡಿ ಅವರ ಕೃಷಿಕಾರ್ಯಗಳಿಗೆ
ನೆರವಾಗುತ್ತಿದೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಒಂದು ಲೀಟರ್ ಹಾಲಿಗೆ ನಾಲ್ಕು
ರೂಪಾಯಿಗಳ ಸಹಾಯಧನ ನೀಡುತ್ತಿದೆ.
ಹೆಣ್ಣುಮಗುವಿಗೂ
ಹಿರಿಮೆಯ ಸ್ಥಾನ ನೀಡಲು ಬಡವರ ಮನೆಯಲ್ಲಿ ಹುಟ್ಟುವ ಪ್ರತಿ ಹೆಣ್ಣುಮಗುವಿಗೆ
"ಭಾಗ್ಯಲಕ್ಷ್ಮಿ" ಬಾಂಡ್ ನೀಡುತ್ತಿದೆ. ಆ ಹೆಣ್ಣುಮಗು ೧೮ ವರ್ಷದ ತರುಣಿಯಾದಾಗ ಆಕೆಗೆ
ಬಾಂಡ್ ಫಲವಾಗಿ ೧ ಲಕ್ಷ ರೂಪಾಯಿಗಳು ಸಿಗುತ್ತವೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು
ಶಾಲೆಗೆ ಹೋಗಲು ಅನುಕೂಲವಾಗುವಂತೆ ಅವರಿಗೆ ಸೈಕಲ್ ನೀಡಲಾಗುತ್ತದೆ. ಸರ್ವರಿಗೂ ಸಮಾನ
ಅವಕಾಶ ಸಿಗಬೇಕೆಂಬುದೇ ನಮ್ಮ ಸರ್ಕಾರದ ಮೂಲತತ್ವ.
ಕರ್ನಾಟಕವು ಕಳೆದ
ವರ್ಷ ಭೀಕರ ಮಳೆ ಮತ್ತು ನೆರೆಹಾವಳಿಯಿಂದ ನರಳಿತು. ಅದರಿಂದ ಸಂತ್ರಸ್ತರಾದವರಿಗೆ "ಆಸರೆ"
ಮನೆಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಇಲ್ಲಿಯವರೆಗೂ ೨೦೦೦ ಮನೆಗಳು
ಸಿದ್ಧಗೊಂಡಿದ್ದು,
ಅವುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಕೆಲಸ ನಡೆದಿದೆ. ಸಂತ್ರಸ್ತರ ಕಣ್ಣೀರು
ಒರೆಸುವುದು ನಮ್ಮ ಸರ್ಕಾರದ ಆದ್ಯತೆಯ ವಿಷಯವಾಗಿದೆ.
ಗ್ರಾಮೀಣಾಭಿವೃದ್ಧಿಯ ಜೊತೆಗೆ ನಗರಾಭಿವೃದ್ಧಿಗೂ ನಮ್ಮ ಬಿಜೆಪಿ ಸರ್ಕಾರ ಮಹತ್ವದ ಗಮನ
ಕೊಡುತ್ತಿದೆ. ಬೆಂಗಳೂರು ಸೇರಿದಂತೆ ಎಲ್ಲ ನಗರಗಳಲ್ಲಿ ಉತ್ತಮ ರಸ್ತೆಗಳು,
ವಿಮಾನ
ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿವೆ.
ಸಮುದ್ರ
ತೀರಗಳಲ್ಲಿ ಬಂದರುಗಳು ರೂಪುಗೊಳ್ಳುತ್ತಿವೆ. ನಿರಂತರ ವಿದ್ಯುತ್ ಪರೈಕೆಗೆ ಸರ್ವ
ಪ್ರಯತ್ನ ನಡೆದಿದೆ. ಮೂಲಸೌಕರ್ಯಗಳೇ ಮುನ್ನಡೆಯ ಮೆಟ್ಟಿಲುಗಳು ಎಂಬುದನ್ನು ನಾವು
ಅರಿತಿದ್ದೇವೆ,
ಅದನ್ನು
ಜಾರಿಮಾಡುತ್ತಿದ್ದೇವೆ. ನಮ್ಮ ರಾಜ್ಯದ ಮಕ್ಕಳ ನೆಮ್ಮದಿಯ ನಾಳೆಗಾಗಿ ಇಂದು ನಾವು
ಕಾರ್ಯೋನ್ಮುಖರಾಗಿದ್ದೇವೆ.
ಜನಪರತೆಯ ಮೂಲಕವೇ
ಜನಪ್ರಿಯತೆ ಎಂಬುದು ಬಿಜೆಪಿ ಸರ್ಕಾರದ ದೃಢ ನಂಬಿಕೆ. ಆದ್ದರಿಂದ ಅಭಿವೃದ್ಧಿಯೇ ನಮ್ಮ
ಆಡಳಿತದ ಮೂಲಮಂತ್ರ. ಕರ್ನಾಟಕವನ್ನು ಅಭಿವೃದ್ಧಿಯ ಮಾದರಿ ರಾಜ್ಯವನ್ನಾಗಿ ಮಾಡಲು
ತಮ್ಮೆಲ್ಲರ ಕೊಡುಗೆ ಮತ್ತು ಕೊಡುಗೈ ಬೇಕೇಬೇಕು. ಹುಟ್ಟಿದ ನೆಲದ ಋಣ ತೀರಿಸಲು ಇದಕ್ಕಿಂತ
ಪಣ್ಯದ ಮಾರ್ಗ ಮತ್ತೇನು ಇದ್ದೀತು?
ಪ್ರಿಯಬಂಧುಗಳೇ,
ಆರು ಕೋಟಿ
ಕನ್ನಡಿಗರ ಅಕ್ಕರೆಯ ಶುಭಾಶಯಗಳನ್ನು "ಅಕ್ಕ" ಸಮ್ಮೇಳನಕ್ಕೆ ಮುಟ್ಟಿಸುತ್ತಿದ್ದೇನೆ.
ಅಮೆರಿಕದಲ್ಲೂ "ಏರಲಿ ಹಾರಲಿ ಕನ್ನಡದ ಬಾವುಟ"! ಕನ್ನಡಂ ಗೆಲ್ಗೆ,
ಕನ್ನಡಂ
ಬಾಳ್ಗೆ !
|