|
ಮುಖಪುಟ
/ಹೊರನಾಡ
ಕನ್ನಡ ಧ್ವನಿ
ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸಣ್ಣ ಕಥಾ ಸ್ಪರ್ಧೆಗೆ ಆಹ್ವಾನ
ಕನ್ನಡದ ಯುವ ಬರಹಗಾರರಿಗೆ ಕರೆ
2010
ಸೆಪ್ಟೆಂಬರ್ 3,
4
ಮತ್ತು 5 ರಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆಯಲಿರುವ 6ನೇ ಅಕ್ಕ ವಿಶ್ವ
ಕನ್ನಡ ಸಮ್ಮೇಳನದ ಅಂಗವಾಗಿ ಸಣ್ಣ ಕತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ
ಸ್ಪರ್ಧೆಯ ಮುಖ್ಯ ಉದ್ದೇಶ 20 ರಿಂದ 30 ರ ವರೆಗಿನ ವಯಸ್ಸಿನ ನಮ್ಮ ಕನ್ನಡ ಯುವ
ಬರಹಗಾರರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದು.
ಈ ಯುವ
ಬರಹಗಾರರು ಕಳಿಸುವ ಕತೆಗಳನ್ನು ಖ್ಯಾತ ಸಾಹಿತಿಗಳನ್ನೊಳಗೊಂಡ ತೀರ್ಪುಗಾರರ ಮಂಡಲಿಗೆ
ಒಪ್ಪಿಸಲಾಗುವುದು. ಆ ಮಂಡಲಿ ನಿರ್ಧರಿಸುವ ಮೊದಲ ಮೂರು ಕತೆಗಳಿಗೆ ಆಕರ್ಷಕ
ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ,
ಈ
ಮೂರು ಕತೆಗಳ ಜೊತೆಗೆ ಉತ್ತಮ ಎಂದು ಮಂಡಲಿ ನಿರ್ಧರಿಸುವ ಇನ್ನೂ 12 ಕತೆಗಳನ್ನು
ಸೇರಿಸಿ ಒಟ್ಟು ಹದಿನೈದು ಕತೆಗಳ ಸಂಗ್ರಹವನ್ನು ಆಕರ್ಷಕವಾದ ಪುಸ್ತಕ ರೂಪದಲ್ಲಿ
ಮುದ್ರಿಸಿ ಅಕ್ಕ ಸಮ್ಮೇಳನಕ್ಕೆ ನೋಂದಾವಣೆ ಸಲ್ಲಿಸಿದವರೆಲ್ಲರಿಗೂ ಹಂಚಲಾಗುವುದು. ಈ
ನಮ್ಮ ಕರೆಯನ್ನು ಮನ್ನಿಸಿ ಕನ್ನಡದ ಯುವ ಬರಹಗಾರರು ಅಧಿಕ ಸಂಖ್ಯೆಯಲ್ಲಿ ಈ
ಸ್ಪರ್ಧೆಯಲ್ಲಿ ಪಾಲುಗೊಳ್ಳುತ್ತಾರೆಂದು ಆಶಿಸುತ್ತೇವೆ. ಕನ್ನಡ ಸಾಹಿತ್ಯದ ಭವ್ಯ
ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸುವ,
ಹಾಗೂ
ಅದನ್ನು ಹೊಸ ಪಥ,
ದಿಕ್ಕುಗಳಲ್ಲಿ ಬೆಳೆಸುವ ಹೊಣೆ ಹೊತ್ತ ಈ ಯುವಜನಾಂಗಕ್ಕೆ ನಮ್ಮ ಹಾರ್ದಿಕ ಸ್ವಾಗತ.
ಸ್ಪರ್ಧೆಯ ಬಗ್ಗೆ ಕೆಲವು ಸೂಚನೆ ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದೆ:
ಲೇಖಕರಿಗೆ
ಸೂಚನೆಗಳು,
ಮಾಹಿತಿಗಳು
-
ಈ
ಸ್ಪರ್ಧೆಯಲ್ಲಿ 20-30 ರ ವಯಸ್ಸಿನ ಯುವ ಬರಹಗಾರರಿಗೆ ಮಾತ್ರ ಪ್ರವೇಶವುಂಟು.
ಬರಹಗಾರರು ಭಾರತದಲ್ಲಾಗಲೀ,
ಬೇರೆಲ್ಲಿಯಾಗಲೀ ಇರಬಹುದು.
-
ನೀವು ಕಳಿಸುವ
ಕತೆ ಕನ್ನಡದಲ್ಲಿರಬೇಕು.
-
ಕತೆ ನಿಮ್ಮ ಸ್ವಂತ ರಚನೆಯಾಗಿರಬೇಕು. ಇದಕ್ಕೆ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
-
ಭಾಷಾಂತರಿಸಿದ
ಕತೆಗಳನ್ನು ಸ್ವೀಕರಿಸುವುದಿಲ್ಲ.
-
ಸ್ಪರ್ಧೆಯಲ್ಲಿ ಭಾಗವಹಿಸುವವರು ತಲಾ ಒಂದು ಕತೆ ಮಾತ್ರ ಕಳಿಸಬಹುದು.
-
ಕತೆಗಳ ಮಿತಿ
೩೦೦೦ ಪದಗಳು. (ಬರಹ ನಂಬರ್ ೧೪ ಫಾಂಟ್ ಸೈಜಿನಲ್ಲಿ ಇದು
8 ½” x 11”
ಹಾಳೆಗಳಲ್ಲಿ ಸುಮಾರು ೧೦ ಪುಟ ತುಂಬುತ್ತದೆ.) ಇಲ್ಲಿ ಸೂಚಿಸಿರುವ ಮಿತಿಗಿಂತಲೂ
ದೀರ್ಘವಾದ ಕತೆಗಳನ್ನು ಸ್ವೀಕರಿಸುವುದಿಲ್ಲ.
-
ಕತೆಗಳನ್ನು
ವಿದ್ಯುನ್ಮಾನ (electronic)
ಮಾಧ್ಯಮದ ಮೂಲಕ ಮಾತ್ರ ಕಳಿಸತಕ್ಕದ್ದು. ಕೈಬರಹದ ಅಥವ ಟೈಪು ಮಾಡಿದ ಕತೆಗಳನ್ನು
ಸ್ವೀಕರಿಸುವುದಿಲ್ಲ. ನುಡಿ ಅಥವ ಬರಹ ತತ್ರಾಂಶಗಳನ್ನು ಮಾತ್ರ ಬಳಸಿ.
-
ಕತೆಗಳನ್ನು
ಸ್ವೀಕರಿಸಲು ಕಡೆಯ ತಾರೀಕು: ಏಪ್ರಿಲ್ ೧೫,
೨೦೧೦.
-
ಕತೆಗಳನ್ನು
email
ಮೂಲಕ ಈ
ವಿಳಾಸಕ್ಕೆ ಕಳಿಸಿಕೊಡಿ:
wkc2010.literary@gmail.com
-
ನಿಮ್ಮ ಕತೆಯ ಜೊತೆಗೆ,
ನಿಮ್ಮ ವಯಸ್ಸಿನ ಬಗ್ಗೆ ಮಾಹಿತಿಯನ್ನು ಕಳಿಸಿಕೊಡಿ. ಇದು ನಿಮ್ಮ ಹೆಸರನ್ನು
ನಮೂದಿಸಿರುವ ಜನನ ಪತ್ರಿಕೆ (Birth
Certificate),
ಸೆಕಂಡರಿ
ಶಾಲಾ ಸರ್ಟಿಫಿಕೇಟ್ (SSLC)
ಅಥವ
ಅವಕ್ಕೆ ಸಮವಾದ ಇನ್ನಾವುದೇ ಆಧಾರವಾಗಿರಬಹುದು.
-
ಕತೆಗಳ
ಸ್ವಾಮ್ಯ,
ಹಕ್ಕು (copyright)
ನಿಮ್ಮದೇ ಆಗಿರುತ್ತದೆ. ಆದರೆ ಈ ಪ್ರಸ್ತುತ ಸಂಗ್ರಹದಲ್ಲಿ ಪ್ರಕಟಗೊಂಡ ಯಾವುದೇ
ಕತೆಯನ್ನು ಮರುಪ್ರಕಟನೆ ಮಾಡುವ ಹಕ್ಕನ್ನು ಅಕ್ಕ ಉಳಿಸಿಕೊಳ್ಳುತ್ತದೆ.
-
ಕತೆಗಳ
ಆಯ್ಕೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾದದ್ದು. ಹೆಚ್ಚಿನ ಮಾಹಿತಿಗೆ:
Satya
732 763 2363 (US)
ಹಾಗೂ
ಜೆ.ಎ.ಸೀತಾರಾಮ್
944-803-8181 (India)
ಇವರನ್ನು ಸಂಪರ್ಕಿಸಬಹುದು.
ಅಕ್ಕ ಹುಟ್ಟು ಹಾಗೂ
ಸಾಧನೆ
ಮುಖಪುಟ
/ಹೊರನಾಡ
ಕನ್ನಡಧ್ವನಿ |