ಮುಖಪುಟ /ಸಾಹಿತ್ಯ

ಗದಗ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ್ ಆಯ್ಕೆ

ಬೆಂಗಳೂರು, ಜ.7 : ಶಿಲ್ಪಕಲೆಗಳ ತೊಟ್ಟಿಲು ವೀರನಾರಾಯಣನ ಪುಣ್ಯಭೂಮಿ ಗದಗದಲ್ಲಿ ಬರುವ ಫೆಬ್ರವರಿ 19 ಹಾಗೂ 20ರಂದು ನಡೆಯಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ, ಲೇಖಕಿ ಗೀತಾ ನಾಗಭೂಷಣ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಈ ವಿಷಯ ತಿಳಿಸಿದ್ದಾರೆ.

ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನೆರೆಯಿಂದ ರಾಜ್ಯದ ಜನತೆ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅಧ್ಯಕ್ಷರ ಮೆರವಣಿಗೆ ರದ್ದುಗೊಳಿಸಲಾಗಿದೆ ಎಂದರು.

76ನೇ ಸಮ್ಮೇಳನದ ಅಂಗವಾಗಿ 76 ಪುಸ್ತಕಗಳ ಪ್ರಕಟಣೆ ಮಾಡಲಾಗುವುದು ಎಂದೂ ನಲ್ಲೂರು ಪ್ರಸಾದ್ ತಿಳಿಸಿದರು.

ಈ ಹಿಂದೆ 1961ರಲ್ಲಿ ಗದುಗಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಆಗ ಕವಿ ಕೆ.ಜಿ.ಕುಂದಣಗಾರ ಅಧ್ಯಕ್ಷರಾಗಿದ್ದರು. 48 ವರ್ಷಗಳ ಬಳಿಕ ಈಗ ಮತ್ತೆ ಗದಗ್ ಕನ್ನಡದ ತೇರು ಎಳೆಯಲು ಸಜ್ಜಾಗುತ್ತಿದೆ. 

ಮುಖಪುಟ /ಸಾಹಿತ್ಯ