|
ಪೂರ್ವ ಜನ್ಮದ ಸುಕೃತ - ಅಶ್ವತ್ಥನಾರಾಯಣ
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅವಕಾಶ ತಮ್ಮ ಬದುಕಿನಲ್ಲೊಂದು ಮೈಲಿಗಲ್ಲು, ಸಾಹಿತ್ಯ ಸರಸ್ವತಿಯ ಸೇವೆ ಮಾಡುವ ಸೌಭಾಗ್ಯ ತಮ್ಮದಾಗಿದೆ ಎಂದು ವಿಶ್ಲೇಷಿಸಿದರು. ಆಯೋಜನೆಯಲ್ಲಿ ಕೆಲವೊಂದು ಲೋಪಗಳಾಗಿವೆ ಎಂಬುದನ್ನು ಒಪ್ಪಿಕೊಂಡ ಅವರು, ಇಂಥ ಸಮ್ಮೇಳನ ನಡೆಸುವಾಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ ಜವಾಬ್ದಾರಿ ವಹಿಸುವುದು ಅಗತ್ಯ. ತಮ್ಮ ತಮ್ಮ ಜಿಲ್ಲೆಯಿಂದ ಬರುವ ಸದಸ್ಯರ ಊಟ, ವಸತಿಯ ಹೊಣೆಯನ್ನು ಆಯಾ ಜಿಲ್ಲೆಯ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ನಿರ್ವಹಿಸಿದೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನ ಧಾವಂತದಲ್ಲೂ ಕನ್ನಡ ಪ್ರೇಮಿಗಳು ಸಮ್ಮೇಳನಕ್ಕೆ ನೀಡಿರುವ ಸ್ಪಂದನ ಅದ್ವಿತೀಯ ಎಲ್ಲರಿಗೂ ನಾವು ಆಭಾರಿಗಳು ಎಂದು ತಿಳಿಸಿದರು. | |||