| |
ಮುಖಪುಟ
/ಸಾಹಿತ್ಯ
ಸಚ್ಚಿನ್
ಎರಡು ದಶಕಗಳ
ಹಲವು ಶತಕಗಳ
ಬಾರಿಸಿ,
ಸಾಧಿಸಿದ
ಪಂದ್ಯ,
ಸರಣಿ ಶ್ರೇಷ್ಠ
ಎದುರಾಳಿ ದಾಳಿ
ಧೂಳಿಪಟ ತಟಸ್ಥ
ಮಾಡಿ ಕಾಡಿರುವ
ಅಜೇಯ
ನೀನಾದೆ
ಭಾರತದ ವಿಜಯ
ಜಯ ಜಯಕಾರ
ಆಶಾ ಸಾಕ್ಷಾತ್ಕಾರ
ಮಾಡುವೆ ನೀನು
ನೀ ನಿಂತರೆ ಗೆದ್ದರೆ
ನಾವೆಲ್ಲಾ ಗೆದ್ದಂತೆ
ನಿನ್ನ ಉತ್ಸಾಹವೇ
ನಮಗೆ ಪ್ರೋತ್ಸಾಹವು
ನೀ ಗೆಲ್ಲುತ ಇರು
ನಮ್ಮ ಗೆಲ್ಲಿಸುತಿರು
ನಾವು ಆನಂದಿಸುವೆವು
ನಿನ್ನ ಸರದಿ
ಆಟವ
ವಿಶ್ವ ಶ್ರೇಷ್ಠನೆ ನೀನು
ಖ್ಯಾತ ವಿಖ್ಯಾತ ನೀನು
ಮನು ಶ್ರೇಷ್ಠ ನೀನು
ಮಿಂಚು ಸಚ್ಚಿನ್ ನೀನು
ಡಾ. ನಾಗಭೂಷಣ್ ಮೂಲ್ಕಿ
ಓಕ್ ಬ್ರೂಕ್,
ಇಲಿನಾಯ್,
ಅಮೇರಿಕ
Email:
nanunaga@gmail.com
ಮುಖಪುಟ
/ಸಾಹಿತ್ಯ |
|
|