|
ಮುಖಪುಟ
/ಪ್ರವಾಸಿತಾಣ
ಮಾಗಡಿಯ
ಬಳಿಯೊಂದು ಸುಂದರ ಪಕ್ಷಿಲೋಕ
ಲೇಖಕರು
:ಪಿ.ಎಸ್.
ಪರ್ವತಿ
ಪ್ರತಿ ವರ್ಷದ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಪ್ರಾರಂಭವಾಗುತ್ತದೆ . ಸ್ಥಳೀಯ ಗ್ರಾಮದ ಜನರಿಗೆ ಅಪ್ಯಾಯಮಾನ ಅನುಭವ ನೀಡುವ ಈ ಬಾನಾಡಿಗಳು, ಆಕರ್ಷಕ ಪಕ್ಷಿಧಾಮವನ್ನೇ ರಚಿಸುತ್ತವೆ. ಹಲವಾರು ಪ್ರಬೇಧಗಳ ಈ ಹಕ್ಕಿಗಳ ಆಶ್ರಯ ತಾಣದಿಂದಾಗಿ ಜಿಲ್ಲೆಯ ಈ ಕೆರೆ ಆಕರ್ಷಕ ಪ್ರವಾಸಿ ತಾಣವಾಗಿ ರೂಪಗೊಂಡಿದೆ .
ಮಾಗಡಿ ಗೂಡು;
ಬನ್ನಿ,
ಈ ಪಕ್ಷಿಧಾಮದಲ್ಲಿ ಒಮ್ಮೆ ಸುತ್ತಾಡಿ ಬಾನಾಡಿಗಳ ದಿನಚರಿಯನ್ನು
ಅಂತುಕೊಳ್ಳೊಣ, ಗದಗದಿಂದ ಹಾವೇರಿಗೆ ತೆರಳುವ
ಮಾರ್ಗದಲ್ಲಿ ೨೬ ಕಿ. ಮಿ. ಸಂಚರಿಸಿದರೆ ಮಾಗಡಿ ಗ್ರಾಮ ದೊರೆಯುತ್ತದೆ . ತಾಲೂಕು
ದೂರದ ಜಮ್ಮು - ಕಾಶ್ಮಿರ್, ಲಡಾಕ್, ಟಿಬೇಟ್ , ಮಲೇಷಿಯಾ, ಶ್ರೀಲಂಕಾ, ಪಾಕಿಸ್ತಾನ, ಅಪಘಾನಿಸ್ತಾನ, ಆಸ್ಟ್ರಿಯಾ, ನೇಪಾಳ, ಬಾಂಗ್ಲಾ ಹಾಗೂ ಹಿಮಾಲಯ ಸರೋವರಗಳಿಂದ ಆಗಮಿಸುವ ಈ ಬಾನಾಡಿಗಳು ಈ ಕೆರೆಯಲ್ಲಿ ಐದಾರು ತಿಂಗಳು ನೆಲೆಯೂರಿ ನಂತರ ಪುನಃ ತಮ್ಮ ತವರಿಗೆ ತೆರಳುತ್ತವೆ . ಪಕ್ಷಿ ತಜ್ಞರ ಪ್ರಕಾರ ಇಂತಹ ಪಕ್ಷಿಗಳು ತಾವು ವಾಸಿಸುವ ಪ್ರದೇಶಗಳಲ್ಲಿ ಹೆಪ್ಪುಗಟ್ಟುವಂತಹ ಶೀತದಿಂದಾಗಿ ಇವುಗಳು ವಲಸೆ ಹೊರಟು ಉಷ್ಣ ಪ್ರದೇಶಗಳತ್ತ ಪಯಣಿಸುತ್ತವಂತೆ ತಮ್ಮ ಪ್ರವಾಸ ಕಾಲದಲ್ಲಿ ಸೂಕ್ತವೆನಿಸುವ ತಾಣವನ್ನು ಆಯ್ದುಕೊಂಡು ಅಲ್ಲಿ ಕೆಲ ಕಾಲ ಇದ್ದು ಮರಳಿ ಮಾರ್ಚ್ ಹೊತ್ತಿಗೆ ತಮ್ಮ ಗೂಡಿಗೆ ಸೇರುತ್ತವೆ . ಹೀಗೆ ಇವುಗಳು ಆಯ್ದುಕೊಂಡ ಸಮಶೀತೋಷ್ಣ ಸ್ಥಳವೇ ಮಾಗಡಿ ಕೆರೆ .
ಇವ ಯಾಊರಾವ
; ನಮ್ಮ ದೇಶದ
ಬಾತುಕೋಳಿಗಳಿಗಿಂತ ಚಿಕ್ಕ ಗಾತ್ರದಲ್ಲಿರುವ ಹಂಸಗಳ ಜಾತಿಗೆ ಸೇರುವ ಈ ಪಕ್ಷಿಗಳ
ಒಡನಾಟದಿಂದ ಮಾಗಡಿ ಕೆರೆ ಕಂಗೋಳಿಸುತ್ತದೆ . ಈಗಾಗಲೇ ಸಾವಿರಾರು ಪಕ್ಷಿಗಳು ಕೆರೆಗೆ
ಅತಿಥಿಗಳಾಗಿ ಆಗಮಿಸಿವೆ . ಇಲ್ಲಿಗೆ ವಲಸೆ ಬರುವ ಈ ವೈವಿಧ್ಯಮಯ ಪಕ್ಷಿಗಳ ಪ್ರಬೇಧ
ಸಹ ಸಾಕಷ್ಟಿದೆ . ಸಾಮಾನ್ಯವಾಗಿ ಅಕ್ಟೋಬರ್
ವಾಕಿಂಗ್ ಪ್ರವೀಣರು ; ಕೆರೆಯಲ್ಲಿ ವಾಸವಾಗುವ ಈ ವಲಸೆ ಹಕ್ಕಿಗಳು ವಾಕಿಂಗ್ ಪ್ರವೀಣರೆಂದರೆ ತಪ್ಪಾಗದು. ಇವುಗಳ ದೈನಂದಿನ ಚಟುವಟಿಕೆ ಬಹು ವಿಶಿಷ್ಟವಾದರು. ಪ್ರತಿದಿನ ನಸುಕಿನ ವೇಳೆಗೆ ಮೈದಡವಿಕೊಂಡು ಆಹಾರ ಅರಸುತ್ತ ಸುತ್ತಲಿನ ಪ್ರದೇಶಗಳತ್ತ ಸಾಕಷ್ಟು ದೂರ ಸಂಚರಿಸುವ ಈ ಪಕ್ಷಿಗಳು ಎಳೆ ಬಿಸಿಲು ಆರಂಭವಾಗುವ ೮ ರಿಂದ ೯ ಗಂಟೆ ಹೊತ್ತಿಗೆ ಕೆರೆ ಅಂಗಳಕ್ಕೆ ವಿಮಾನಗಳಂತೆ ಕಾಲಿಡುತ್ತವೆ . ಸಂಜೆಯವರೆಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸಿ, ವಿರಮಿಸುವ ಈ ಸಂಕುಲ , ಸಂಜೆ ೬ ರ ಹೊತ್ತಿಗೆ ಪುನಃ ಆಹಾರ ಅರಸುತ್ತ ಮತ್ತೊಮ್ಮೆ ವಾಕಿಂಗ್ ಪ್ರಾರಂಭಿಸುತ್ತವೆ . ಒಕ್ಕಲಾದ ಹೊಲದಲ್ಲಿಯ ಅಳಿದುಳಿದ ಕಾಳು , ಕೆರೆಯಲ್ಲಿರುವ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುವ ಈ ಪಕ್ಷಿಗಳು ರಾತ್ರಿ ಕೆರೆಯಲ್ಲಿ ತಂಗುತ್ತವೆ .
ಬರದ ಛಾಯೆಯಲ್ಲಿದ್ದ ಈ ಕೆರೆಗೆ ಅದೃಷ್ಟವಶಾತ್ ಬಂದ ಮಳೆಯಿಂದ ಕೆರೆ ತುಂಬಿದೆ . ಹೀಗಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿದಿರುವ ಈ ಹಕ್ಕಿಗಳು, ಪಕ್ಷಿ ಪ್ರೀಯರನ್ನು ಸೆಳೆಯುತ್ತಿವೆ . ಐದರಿಂದ ಹತ್ತು ಸಾವಿರದ ವರೆಗೂ ಬರುವ ಚಳಿಗಾಲದ ಈ ಖಾಯಂ ಅತಿಥಿಗಳಿಂದಾಗಿ ಮಾಗಡಿ ಕೆರೆ ಪಕ್ಷಿ ಧಾಮವಾಗಿ ರೂಪಗೊಂಡ ನಿಸರ್ಗ ಪ್ರೇಮಿಗಳನ್ನು , ಶಾಲಾ ಮಕ್ಕಳನ್ನು ಆರ್ಕಷಿಸುತ್ತದೆ . ಮಾಗಡಿ ಗ್ರಾಮದ ಪಕ್ಷಿ ಪ್ರೀಯ ಯುವಕರ ಪಡೆ ಸಂಘವೊಂದನ್ನು ಸ್ಥಾಪಿಸಿ ಪಕ್ಷಿಗಳ ರಕ್ಷಣೆ ಮುಂದಾಗಿದೆ . ಈ ಕೆರೆಯನ್ನು ಅಧಿಕೃತ ಪಕ್ಷಿ ಧಾಮವನ್ನಾಗಿ ಘೋಷಿಸಿ ಪಕ್ಷಿ ಸಂರಕ್ಷಣೆ ಪೂರಕ ವಾತಾವರಣ ಕಲ್ಪಿಸಬೇಕೆಂಬುದು ಅವರ ಬೇಡಿಕೆಯಾಗಿದೆ .
| |||