|
ಆನೆಗಳಿಗೆ ಸ್ವರ್ಗ – ಸಕ್ರೇಬೈಲು ಬಿಡಾರ
ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ಕರೆ ಬೈಲಿಗೆ ಶತಮಾನದ ಇತಿಹಾಸವಿದೆ. ಸಕ್ಕರೆ ಬೈಲಿನಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಜಳಕ ಮಾಡುವುದನ್ನು ನೋಡುವುದೇ ಒಂದು ಸೊಬಗು.
ಸ್ವಚ್ಛಂದ
ಜೀವನಕ್ಕೆ ಹೆಸರಾದ ಆನೆಗಳು,
ಸಕ್ರೆಬೈಲಿನಲ್ಲಿ ಸ್ನೇಹಜೀವಿಗಳಾಗಿ ವಿಹರಿಸುವುದನ್ನು
ನೋಡಲೆಂದೇ ನಿತ್ಯವೂ
ಪ್ರತಿನಿತ್ಯ 6 -7 ಗಂಟೆಗೆಲ್ಲ ಕಾಡಿನಿಂದ ಸಕ್ಕರೆಬೈಲಿಗೆ ಬರುವ ಆನೆಗಳು ಪ್ರಶಾಂತವಾಗಿ ಹರಿಯುವ ತುಂಗಾನದಿಯಲ್ಲಿ ಆನಂದದಿಂದ ಜಲಕ್ರೀಡೆಯಾಡುತ್ತವೆ. ಮಾವುತರು ತಮ್ಮ ಮೈ ಉಜ್ಜಲು ಅನುವಾಗುವಂತೆ ನೀರಿನಲ್ಲಿ ಮಲಗುವ ಆನೆಗಳು, ನಂತರ ಸೊಂಡಿಲಿನಲ್ಲಿ ನೀರು ತುಂಬಿಕೊಂಡು ಪಕ್ಕದಲ್ಲಿರುವ ಆನೆಗಳಿಗೆ ಹಾಗೂ ತಮ್ಮ ಮರಿಗಳಿಗೆ ಜಲಸಿಂಚನ ಮಾಡುವ ನೋಟ ನಯನ ಮನೋಹರ.
ಮರಿ ಹಾಕಿರುವ
ಆನೆಗಳಿಗೆ ಮಾವುದರು ಇಲ್ಲಿ ವಿಶೇಷ ತಿಂಡಿ ತಿನಿಸು ನೀಡುತ್ತಾರೆ. ಐದು ಕಿಲೋಗ್ರಾಂ
ಅಕ್ಕಿ,
ಹಣ್ಣು ತೆಂಗಿನಕಾಯಿ ಬೆಲ್ಲ ಎಣ್ಣೆ ಇರುವ ಆಹಾರ ನೀಡಿ ಅವಕ್ಕೆ
ತಿಂಗಳುಗಟ್ಟಲೆ ಬಾಣಂತನ ಮಾಡುತ್ತಾರೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in | |||